Breaking News

ಎತ್ತುಗಳನ್ನು ಜಿಗಿಸಿ ಕರಿ ಹರಿದು ಕಾರಹುಣ್ಣಿಮೆ ಆಚರಣೆ… ಹುಕ್ಕೇರಿಯಲ್ಲಿ ಕಾರಹುಣ್ಣಿಮೆ ಸಡಗರ

Spread the love

ಎತ್ತುಗಳನ್ನು ಜಿಗಿಸಿ ಕರಿ ಹರಿದು ಕಾರಹುಣ್ಣಿಮೆ ಆಚರಣೆ…
ಹುಕ್ಕೇರಿಯಲ್ಲಿ ಕಾರಹುಣ್ಣಿಮೆ ಸಡಗರ
ಎತ್ತುಗಳ ಮೂಲಕ ಕರಿ ಹರಿಯುವ ಮೂಲಕ ಹುಕ್ಕೇರಿ ನಗರದಲ್ಲಿ ಕಾರ ಹುಣ್ಣಿಮೆಯನ್ನು ಆಚರಿಸಲಾಯಿತು.
ಹುಕ್ಕೇರಿ ಪಟ್ಟಣದ ಹಳ್ಳದಕೇರಿ ಭಾಗದ ದುರದುಂಡಿ ನಾಯಿಕ ಇವರ ಮನೆಯಲ್ಲಿ ಎತ್ತಿಗೆ ಪೂಜೆ ಸಲ್ಲಿಸುವ ಮೂಲಕ ಕರಿ ಹಾಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಬಣ್ಣದಿಂದ ಅಲಂಕರಿಸಿದ ಎತ್ತುಗಳನ್ನು ರೈತರು ಗ್ರಾಮದ ವಿವಿಧ ಓಣಿಗಳಲ್ಲಿ ಓಡಿಸಿ ಮುಖ್ಯ ಬೀದಿಯಲ್ಲಿ ಬೃಹತ್ ಆಕಾರದ ಮುಳ್ಳು ,ಕಂಟಿ ಮತ್ತು ಆಲದ ಟೊಂಗೆಗೆ ಕೋಬ್ಬರಿ ಕಟ್ಟಿ ರಸ್ತೆ ಬಂದ್ ಮಾಡಿರುತ್ತಾರೆ
ಆದರೆ ಎತ್ತು ಮುಳ್ಳು ಕಂಟಿಯಲ್ಲಿ ಜಿಗಿದು ಕರಿ ಹಾಯುವ ಮೂಲಕ ಕಾರ ಹುಣ್ಣಿಮೆ ಆಚರಿಸಲಾಯಿತು.
ನಂತರ ರೈತರು ಅಲ್ಲಿಯ ಗಿಡದ ಟೊಂಗೆಗಳನ್ನು ಒಯ್ದು ತಮ್ಮ ಮನೆಗಳ ಮೇಲೆ ಹಾಕಿ ಕಾರ ಹುಣ್ಣಿಮೆಗೆ ತೇರೆ ಎಳೆದರು, ಮನೆಯಲ್ಲಿ ಹೋಳಿಗೆ ಮಾಡಿ ಹಬ್ಬದೂಟ ಸವಿದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ