ಚಾಮರಾಜನಗರ, ಜುಲೈ 09: ಗುಂಡ್ಲುಪೇಟೆ (Gundupete) ತಾಲೂಕಿನ ಕುರಬರಗೇರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ ಓರ್ವ ವಿದ್ಯಾರ್ಥಿಯು ಪಾಠ ಕೇಳುತ್ತಿರುವಾಗಲೇ ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾನೆ.
ಮನೋಜ್ ಕುಮಾರ್ (10) ಮೃತ ದುರ್ದೈವಿ. ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮನೋಜ್ ಕುಮಾರ್ ಶಾಲೆಯಲ್ಲಿ ಪಾಠ ಕೇಳುತ್ತಿದ್ದಾಗ ಕುಸಿದುಬಿದ್ದು, ಮೃತಪಟ್ಟಿದ್ದಾನೆ. ಮೃತ ಮನೋಜ್ ಕುಮಾರ್ ಹೃದಯದಲ್ಲಿ ರಂಧ್ರ ಇದ್ದು, ಜಯದೇವ, ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದನು ಎಂದು ತಿಳಿದುಬಂದಿದೆ.
Laxmi News 24×7