Breaking News

ಆಹಾರ ಮತ್ತು ಪಾನೀಯ ವಿಭಾಗದಲ್ಲಿ ‘ನಂದಿನಿ’ ಬ್ರ್ಯಾಂಡ್​ಗೆ ದೇಶದಲ್ಲೇ ಟಾಪ್-4 ಸ್ಥಾನ

Spread the love

ಬೆಂಗಳೂರು: ಹಾಲು ಮತ್ತು ಹಾಲಿನ ಉತ್ಪನ್ನಗಳ ಮೂಲಕ ರಾಜ್ಯದಲ್ಲಿ ಮನೆಮಾತಾಗಿರುವ ಕೆಎಂಎಫ್​ನ ‘ನಂದಿನಿ’ ಆಹಾರ ಮತ್ತು ಪಾನೀಯ ವಿಭಾಗದಲ್ಲಿ ದೇಶದಲ್ಲಿಯೇ ಅತ್ಯುತ್ತಮ ಟಾಪ್​​​​-4 ಬ್ರ್ಯಾಂಡ್​ ಆಗಿ ಹೊರಹೊಮ್ಮಿದೆ. ಅಷ್ಟೇ ಅಲ್ಲದೆ, ಭಾರತೀಯ ಟಾಪ್​​-100 ಬ್ರ್ಯಾಂಡ್​ಗಳಲ್ಲಿ ನಂದಿನಿಯು 38ನೇ ಸ್ಥಾನ ಅಲಂಕರಿಸಿದೆ.

ವಿಶ್ವದಾದ್ಯಂತ ಬ್ರ್ಯಾಂಡ್​ಗಳ ಮೌಲ್ಯಮಾಪನಕ್ಕೆ ಹೆಸರಾಗಿರುವ ಬ್ರ್ಯಾಂಡ್​ ಫೈನಾನ್ಸ್​ ಸಂಸ್ಥೆ ಲಂಡನ್​ನಲ್ಲಿ ಬಿಡುಗಡೆ ಮಾಡಿದ ಈ ರ‍್ಯಾಂಕಿಂಗ್​ ಪಟ್ಟಿಯಲ್ಲಿ ಸಹಕಾರಿ ಕ್ಷೇತ್ರದ ನಂದಿನಿಯು ದೇಶದ ಅತ್ಯುತ್ತಮ ಬ್ರ್ಯಾಂಡ್​ಗಳ ಪಟ್ಟಿಗೆ ಸೇರಿದೆ. ದೇಶದ ಆಹಾರ ಮತ್ತು ಪಾನೀಯ ವಿಭಾಗದಲ್ಲಿ ನಾಲ್ಕನೇ ಉತ್ತಮ ಬ್ರ್ಯಾಂಡ್​ ಎನಿಸಿದೆ.

ಕಳೆದ ವರ್ಷವೂ ಬ್ರ್ಯಾಂಡ್​​ ಫೈನಾನ್ಸ್​​ ಸಂಸ್ಥೆ ಬಿಡುಗಡೆ ಮಾಡಿದ ರ‍್ಯಾಂಕಿಂಗ್​ನಲ್ಲಿ ಕೆಎಂಎಫ್​ನ ನಂದಿನಿ​​ ನಾಲ್ಕನೇ ಸ್ಥಾನಗಳಿಸಿತ್ತು. ಈಗ 2025ರಲ್ಲೂ ಸಹ ಆಹಾರ ಮತ್ತು ಪಾನೀಯ ವಿಭಾಗದಲ್ಲಿ ಗಳಿಸಿದ ನಾಲ್ಕನೇ ಶ್ರೇಷ್ಠ ಬ್ರ್ಯಾಂಡ್​ ಎನ್ನುವ ತನ್ನ ರ‍್ಯಾಂಕಿಂಗ್​ ಅನ್ನು ಉಳಿಸಿಕೊಂಡಿದೆ.

“ಬ್ರ್ಯಾಂಡ್ ಫೈನಾನ್ಸ್ ಸಂಸ್ಥೆ ಉತ್ತಮ ಬ್ರ್ಯಾಂಡ್​ಗಳ ಕುರಿತ ವರದಿಯಲ್ಲಿ ದೇಶೀಯ ಆಹಾರ ಮತ್ತು ಪಾನೀಯ ವಲಯದಲ್ಲಿ ಗುಜರಾತ್ ಮೂಲದ ಅಮೂಲ್ ಟಾಪ್​-1, ಮದರ್​ ಡೈರಿ ಟಾಪ್​-2, ಬ್ರಿಟಾನಿಯಾ ಟಾಪ್​-3, ಕೆಎಂಎಫ್ ನಂದಿನಿ ಟಾಪ್-4 ಹಾಗೂ ಡಾಬರ್ ಟಾಪ್-5ನೇ ಸ್ಥಾನವನ್ನು ಪಡೆದಿವೆ” ಎಂದು ಕೆಎಂಎಫ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


Spread the love

About Laxminews 24x7

Check Also

ಹೆಸ್ಕಾಂ ನಿರ್ಲಕ್ಷ್ಯಕ್ಕೆ ಕಂಗಾಲಾದ ಬಾದಾಮಿ ರೈತರು: ವಾರವಾದರೂ ಮುಗಿಯದ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯ!

Spread the love ಹೆಸ್ಕಾಂ ನಿರ್ಲಕ್ಷ್ಯಕ್ಕೆ ಕಂಗಾಲಾದ ಬಾದಾಮಿ ರೈತರು: ವಾರವಾದರೂ ಮುಗಿಯದ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯ! • …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ