Breaking News

ಪ್ರಾಡ ಕೊಲ್ಹಾಪುರಿ ಪಾದರಕ್ಷೆಗೆ GI ಟ್ಯಾಗ್ ಇದ್ದರೆ ಸಾಲದು:ಪ್ರಿಯಾಂಕ್ ಖರ್ಗೆ

Spread the love

ಬೆಂಗಳೂರು: ಪ್ರಾಡ ಕೊಲ್ಹಾಪುರಿ ಪಾದರಕ್ಷೆಗಳಿಗೆ ಕೇವಲ ಜಿಐ(ಜಿಯಾಗ್ರಾಫಿಕಲ್ ಇಂಡಿಕೇಷನ್) ಟ್ಯಾಗ್ ಇದ್ದರೆ ಸಾಲದು, ಜಾಗತಿಕ ವೇದಿಕೆ ನೀಡುವುದು ನಮ್ಮ ಜವಾಬ್ದಾರಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಅಂತಾರಾಷ್ಟ್ರೀಯ ಫ್ಯಾಷನ್ ಸಂಸ್ಥೆಗಳು ನಮ್ಮ ವಿನ್ಯಾಸಗಳನ್ನು ಅಳವಡಿಸಿಕೊಂಡಾಗ, ಅವರ ಹೆಸರುಗಳು, ಕೆಲಸ ಮತ್ತು ಪರಂಪರೆಯನ್ನು ಪ್ರದರ್ಶಿಸಬೇಕು. ಬದಿಗಿಡಬಾರದು. ಜಿಐ ಟ್ಯಾಗ್ ಅವರಿಗೆ ಕಾನೂನು ಹಕ್ಕುಗಳನ್ನು ಮಾತ್ರ ನೀಡುತ್ತದೆ. ಅವರಿಗೆ ಜಾಗತಿಕ ವೇದಿಕೆಗಳನ್ನು ನೀಡುವುದು ಈಗ ನಮ್ಮ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.

ಈ ಕುಶಲಕರ್ಮಿಗಳಿಗೆ ಕೌಶಲ್ಯ, ಬ್ರ್ಯಾಂಡಿಂಗ್, ವಿನ್ಯಾಸ ನಾವೀನ್ಯತೆ ಮತ್ತು ಜಾಗತಿಕ ಮಾರುಕಟ್ಟೆ ಪ್ರವೇಶದಲ್ಲಿ ನಾವು ಹೂಡಿಕೆ ಮಾಡಬೇಕಾಗಿದೆ. ಅವರು ಕೇವಲ ಬ್ರಾಂಡ್ ಹೆಸರಿಗೆ ಮಾತ್ರ ಅರ್ಹರೆಂದು ಗುರುತಿಸಿದರೆ ಸಾಕಾಗುವುದಿಲ್ಲ. ಅವರಿಗೆ ಉತ್ತಮ ಬೆಲೆಗಳು ಸಿಗಬೇಕು. ವ್ಯಾಪಕ ಮಾನ್ಯತೆ ಮತ್ತು ತಮ್ಮ ಕರಕುಶಲತೆಯಿಂದ ಶಾಶ್ವತವಾದ, ಗೌರವಾನ್ವಿತ ಜೀವನೋಪಾಯವನ್ನು ನಿರ್ಮಿಸುವ ಅವಕಾಶವನ್ನು ಪಡೆಯಲು ಅರ್ಹರಾಗಿದ್ದು, ಅಂತಹ ವಾತಾವರಣ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಾಡ ಕೊಲ್ಹಾಪುರಿ ಪಾದರಕ್ಷೆಗಳನ್ನು ಒಂದು ಜೋಡಿಗೆ ₹1.2 ಲಕ್ಷಕ್ಕೆ ಮಾರಾಟ ಮಾಡಲಾಗುತ್ತಿದೆ. ಇದು ಕೆಲವರಿಗೆ ಮಾತ್ರ ತಿಳಿದಿದೆ. ಈ ಐಕಾನಿಕ್ ಪಾದರಕ್ಷೆಗಳನ್ನು ತಯಾರಿಸುವ ಹೆಚ್ಚಿನ ಸಂಖ್ಯೆಯ ಕುಶಲಕರ್ಮಿಗಳು ವಾಸ್ತವವಾಗಿ ಕರ್ನಾಟಕದ ಅಥಣಿ, ನಿಪ್ಪಾಣಿ, ಚಿಕ್ಕೋಡಿ, ರಾಯ್ಬಾಗ್ ಮತ್ತು ಬೆಳಗಾವಿಯ ಇತರ ಭಾಗಗಳು ಹಾಗೂ ಬಾಗಲಕೋಟೆ ಮತ್ತು ಧಾರವಾಡದಲ್ಲಿ ವಾಸಿಸುತ್ತಿದ್ದಾರೆ. ಅವರು ತಲೆಮಾರುಗಳಿಂದ ಈ ಮಾದರಿಯ ಪಾದರಕ್ಷೆಗಳನ್ನು ತಯಾರಿಸಿ, ವಿಶೇಷವಾಗಿ ಹತ್ತಿರದ ಪಟ್ಟಣಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದು ಸ್ವಯಂ ಮಾರುಕಟ್ಟೆಯಾಗಿ ಮತ್ತು ಕಾಲಾನಂತರದಲ್ಲಿ ಬ್ರ್ಯಾಂಡ್ ಆಗಿ ಮಾರ್ಪಟ್ಟಿದೆ ಎಂದಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ