Breaking News

ಹುಬ್ಬಳ್ಳಿಯ ಕೆನರಾ ಬ್ಯಾಂಕ್ ಮ್ಯಾನೇಜರ್‌ನಿಂದಲ್ಲೇ 53 ಕೋಟಿ ದರೋಡೆ, ಮೂವರು ಬಂಧನ.. ಬ್ಯಾಂಕ್‌ನಲ್ಲಿ ಮಾಟಮಂತ್ರ ನಡೆಸಿ ದರೋಡೆ.. ಉಳಿದ ಆರೋಪಿಗಳು ಎಸ್ಕೇಪ್..

Spread the love

ಹುಬ್ಬಳ್ಳಿಯ ಕೆನರಾ ಬ್ಯಾಂಕ್ ಮ್ಯಾನೇಜರ್‌ನಿಂದಲ್ಲೇ 53 ಕೋಟಿ ದರೋಡೆ, ಮೂವರು ಬಂಧನ.. ಬ್ಯಾಂಕ್‌ನಲ್ಲಿ ಮಾಟಮಂತ್ರ ನಡೆಸಿ ದರೋಡೆ.. ಉಳಿದ ಆರೋಪಿಗಳು ಎಸ್ಕೇಪ್..
ಕಳೆದ ತಿಂಗಳು 25 ರಂದು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್‌ನಲ್ಲಿ ನಡೆದಿದ್ದು ಕೋಟ್ಯಾಂತರ ಮೌಲ್ಯದ ದರೋಡೆ ಪ್ರಕರಣವನ್ನು ಭೇದಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು.
ವಿಜಯಪುರ ನಗರದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ ಲಾಕರ್‌ನಲ್ಲಿದ್ದ ಅಂದಾಜು 53.26 ಕೋಟಿ ರೂ. ಮೌಲ್ಯದ 58.97 ಕೆ.ಜಿ (58,976.94 ಗ್ರಾಂ.) ಬಂಗಾರದ ಆಭರಣಗಳು ಹಾಗೂ ನಗದು ಹಣ ರೂ. 5,20,450/-ಹೀಗೆ ಒಟ್ಟು 53,31,20,450/- ಕೋಟಿ ರೂ. ಮೌಲ್ಯದ ಬಂಗಾರದ ಆಭರಣಗಳು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.
ಈ ಪ್ರಕರಣದಲ್ಲಿ ಹುಬ್ಬಳ್ಳಿಯ ಆರೋಪಿಗಳಾದ ಸೀನಿಯರ್ ಮ್ಯಾನೇಜರ್ ಕೆನರಾ ಬ್ಯಾಂಕ್‌ನ ವಿಜಯಕುಮಾರ ಮಿರಿಯಾಲ, ಹುಬ್ಬಳ್ಳಿ ಖಾಸಗಿ ಉದ್ಯೋಗಿ
ಚಂದ್ರಶೇಖರ ನೆರೆಲ್ಲಾ, 38 ವರ್ಷ ಹಾಗೂ ಸುನೀಲ ತಂದೆ ನಂರಸಿಂಹಲು ಮೋಕಾ, 40 ವರ್ಷ ಬಂಧಿತರು. ಆರೋಪಿತರು ವ್ಯವಸ್ಥಿತವಾಗಿ ಒಳಸಂಚು ಮಾಡಿ ಬ್ಯಾಂಕಿನಲ್ಲಿದ್ದ ಬೃಹತ್ ಮೊತ್ತದ ಬಂಗಾರದ ಆಭರಣಗಳನ್ನು ಹಾಗೂ ನಗದು ಹಣವನ್ನು ದೋಚಿಕೊಂಡು ಹೋಗಿದ್ದಲ್ಲದೇ, ತನಿಖೆಯ ದಿಕ್ಕು ತಪ್ಪಿಸುವಂತಹ ಹಲವಾರು ದೃಶ್ಯಾವಳಿಗಳನ್ನು ಸೃಷ್ಟಿಸಿದ್ದರೂ ಪ್ರಕರಣ ಭೇದಿಸಲಾಗಿದೆ ಎಂದರು. ಅಲ್ಲದೇ,
ಆರೋಪಿತರಿಂದ ಕೃತ್ಯಕ್ಕೆ ಬಳಸಿದ 02 ಕಾರುಗಳು ಹಾಗೂ ಕಾರುಗಳಲ್ಲಿ ಸಾಗಾಟ ಮಾಡುತ್ತಿದ್ದ ಅಂದಾಜು 10 ಕೋಟಿ 75 ಲಕ್ಷ ರೂ. ಮೌಲ್ಯದ 10.5 ಕೆ.ಜಿ ಬಂಗಾರದ ಆಭರಣ ಹಾಗೂ ಆಭರಣ ಕರಗಿಸಿದ ಬಂಗಾರದ ಗಟ್ಟಿಗಳನ್ನು ವಶಪಡಿಸಿಕೊಂಡು, ಇನ್ನುಳಿದ ಆರೋಪಿತರು ಹಾಗೂ ಕಳುವಾದ ವಸ್ತುಗಳ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ ಎಂದರು.

Spread the love

About Laxminews 24x7

Check Also

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಮಾರ್ಗ ಬದಲಾವಣೆ:

Spread the loveಹುಬ್ಬಳ್ಳಿ: ನಾಗಸಮುದ್ರಂ ರೈಲ್ವೆ ನಿಲ್ದಾಣದಲ್ಲಿ ಹಾಲಿ ಇರುವ ಲೂಪ್ ಲೈನ್ (ರೋಡ್-3) ಅನ್ನು ಮುಖ್ಯ ಲೈನ್ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ