ಅಂಕಲಗಿ-ಅಕ್ಕತಂಗೇರಹಾಳದಲ್ಲಿ ಲಾಭಾರ್ಥಿಗಳಿಗೆ ವಿವಿಧ ಯೋಜನೆಗಳನ್ನು ವಿತರಿಸಿದ ಶಾಸಕ ರಮೇಶ್ ಜಾರಕಿಹೊಳಿ
ಅಂಕಲಗಿ-ಅಕ್ಕತಂಗೇರಹಾಳದಲ್ಲಿ ಲಾಭಾರ್ಥಿಗಳಿಗೆ ವಿವಿಧ ಯೋಜನೆಗಳನ್ನು ಶಾಸಕ ರಮೇಶ್ ಜಾರಕಿಹೊಳಿ ಅವರು ವಿತರಿಸಿದರು.
ಗೋಕಾಕ ತಾಲೂಕಿನ ಅಂಕಲಗಿ-ಅಕ್ಕತಂಗೇರಹಾಳ ಪಟ್ಟಣ ಪಂಚಾಯಿತಿ ವತಿಯಿಂದ ಸನ್ 2023.24 ಮತ್ತು 2024,25 ನೇ ಸಾಲಿನ ಎಸ್.ಎಫ್.ಸಿ ಯೋಜನೆಯಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಇದ್ದರೆ ಬಡ ಜನಾಂಗದವರಿಗೆ ಸೋಲಾರ್ ವಿದ್ಯುತ್ ದೀಪ,ಹೊಲಿಗೆ ಯಂತ್ರ,ಅಡುಗೆ ಅನಿಲ,ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ವಿತರಣೆ ಹಾಗೂ ಪೌರಕಾರ್ಮಿಕರಿಗೆ ಸಮವಸ್ತ್ರ ಪರಿಕರ ವಿತರಣೆ ಮತ್ತು 5ನೇ ಹಣಕಾಸು ಯೋಜನೆಯಡಿಯಲ್ಲಿ ಖರೀದಿಸಿದ ಟ್ರ್ಯಾಕ್ಟರ್’ಗಳ ಪೂಜಾ ಕಾರ್ಯಕ್ರಮ ಹಾಗೂ ವಿತರಣೆಯನ್ನು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ಧ ಗೋಕಾಕ ಶಾಸಕರಾದ ರಮೇಶ ಜಾರಕಿಹೊಳಿ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಭೀಮನಗೌಡ ಪೊಲೀಸ್ ಗೌಡರ್ ಸೇರಿದಂತೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಸೇರಿದಂತೆ ಅಂಕಲಗಿ-ಅಕ್ಕತಂಗೇರಹಾಳ ಪಟ್ಟಣದ ಗುರುಹಿರಿಯರು,ಮುಖಂಡರು ಉಪಸ್ಥಿತರಿದ್ದರು.