Breaking News

ಹೆಣ್ಮಕ್ಕಳು ಎಲ್ಲ ಕ್ಷೇತ್ರದಲ್ಲಿಯೂ ಮೇಲುಗೈ ಸಾಧಿಸಲು ವರವಾಗಿ ಬಂದಿದ್ದು ಭಾರತೀಯ ಸಂವಿಧಾನ; ಎಲ್.ಎನ್.ಮುಕುಂದರಾಜ್

Spread the love

ಹೆಣ್ಮಕ್ಕಳು ಎಲ್ಲ ಕ್ಷೇತ್ರದಲ್ಲಿಯೂ ಮೇಲುಗೈ ಸಾಧಿಸಲು ವರವಾಗಿ ಬಂದಿದ್ದು ಭಾರತೀಯ ಸಂವಿಧಾನ; ಎಲ್.ಎನ್.ಮುಕುಂದರಾಜ್
ಎಲ್ಲ ಕ್ಷೇತ್ರಗಳಲ್ಲಿಯೂ ಈಗ ಹೆಣ್ಣು ಮಕ್ಕಳು ಈಗ ಮೇಲುಗೈ ಸಾಧಿಸಿದ್ದಾರೆ. ಇದಕ್ಕಾಗಿ ನಮಗೆಲ್ಲ ವರವಾಗಿ ಬಂದಿದ್ದು ಈ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವೆಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್.ಮುಕುಂದರಾಜ್ ಅವರು ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಳಗಾವಿಯ ಚಕೋರ ಸಾಹಿತ್ಯ ವಿಚಾರ ವೇದಿಕೆ, ಕರ್ನಾಟಕ ಲೇಖಕಿಯರ ಸಂಘ ಮತ್ತು ಕನ್ನಡ ಸಾಹಿತ್ಯ ಭವನ ವಿಶ್ವಸ್ಥ ಮಂಡಳಿಯ ವತಿಯಿಂದ ವಿಶೇಷ ಉಪನ್ಯಾಸ ಮಾಲಿಕೆ 8 ಮತ್ತು ಮತ್ತು ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಸ್ತಾಕ್ ಮತ್ತು ದೀಪಾ ಭಾಸ್ತಿ ಅವರಿಗೆ ಅಭಿನಂದನೆ ಗೌರವ ಮತ್ತು ವಿಮರ್ಶಾ ಲೇಖನ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ನಡೆಯಿತು.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್.ಮುಕುಂದರಾಜ್ ಅವರು ಸಮಾರಂಭವನ್ನು ಉದ್ಘಾಟಿಸಿದರು. ಡಾ. ಕೆ.ಆರ್. ಸಿದ್ಧಗಂಗಮ್ಮ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕರಿಯಪ್ಪ ಎನ್., ಆರ್.ಬಿ ಕಟ್ಟಿ ಮತ್ತು ಡಾ. ನಿರ್ಮಲಾ ಬಟ್ಟಲ್, ಡಾ. ನೀತಾ ರಾವ್ ಎಲ್.ಎಸ್. ಶಾಸ್ತ್ರೀ, ನಾಗೇಶ್ ನಾಯಕ ಇನ್ನುಳಿದವರು ಉಪಸ್ಥಿತರಿದ್ಧರು.
ಎಲ್ .ಎನ್ ಮುಕುಂದರಾವ್ ಅವರು ಮಹಿಳೆಯರ ಮೇಲಿನ ಅನ್ಯಾಯದ ಬಗ್ಗೆ ಮೊದಲಿನ ಕಾಲದಲ್ಲಿಯೂ ಬುದ್ಧ ಬಸವ ಅಂಬೇಡ್ಕರ ಹಲವಾರು ಮಹಾತ್ಮರು ಧ್ವನಿ ಎತ್ತಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ನಿರಂತರ ಹೋರಾಡಲಾಗಿದೆ. ಎಲ್ಲರೂ ಈಗ ಸಾಕ್ಷರರಾಗಿದ್ದಾರೆ. ಕಾಲ ಬದಲಾಗಿದೆ. ಹೆಣ್ಣು ಮಕ್ಕಳನ್ನು ಪಾಲಕರು ಸಮಾನವಾಗಿ ನೋಡುತ್ತಿದ್ದಾರೆ.
ಈಗ ಹೆಣ್ಣು ಮಕ್ಕಳು ಉನ್ನತವಾದ ಸ್ಥಾನವನ್ನು ಪಡೆಯುತ್ತಿರುವುದು ಅದ್ಭುತವೇ ಸರಿ. ಎಲ್ಲ ಕ್ಷೇತ್ರಗಳಲ್ಲಿಯೂ ಹೆಣ್ಣು ಮಕ್ಕಳು ಈಗ ಮೇಲುಗೈ ಸಾಧಿಸಿದ್ದಾರೆ. ಇದಕ್ಕಾಗಿ ನಮಗೆಲ್ಲ ವರವಾಗಿ ಬಂದಿದ್ದು ಈ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ. ಯಾವುದೇ ತಾರತಮ್ಯ ನೀಡದೇ ಸಮಾನ ಅವಕಾಶವನ್ನು ಭಾರತೀಯ ಸಂವಿಧಾನ ಕಲ್ಪಿಸುತ್ತದೆ ಎಂದರು.
ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಅವರು ವೈಚಾರಿಕತೆಯನ್ನು ಸಾಹಿತ್ಯದ ಮೂಲಕ ಜನರಲ್ಲಿ ತುಂಬಲಾಗುತ್ತಿದೆ. ಬೆಳಗಾವಿ ಚಕೋರ ಸಾಹಿತ್ಯ ವೇದಿಕೆಯ ಉದ್ಧೇಶವನ್ನು ತಿಳಿಸಿದರು. ಸಾಂಪ್ರದಾಯಿಕ ಸಾಹಿತ್ಯಕ್ಕಿಂತ ನಮ್ಮ ಓದು ಬರಹಗಳು ಬೇರೆ ಮಾರ್ಗದಲ್ಲಿ ಸಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಅಧ್ಯಯನ ಮತ್ತು ಸಂಶೋಧನೆಗಳು ನಡೆದು ಬಂದ ದಾರಿಯನ್ನು ಅವಲೋಕಿಸಬೇಕಿದೆ. ಇಡೀ ಜಗತ್ತೇ ಕನ್ನಡ ಭಾಷೆಯತ್ತ ತಿರುಗಿ ನೋಡುವಂತೆ ಮಾಡಿರುವುದು ಬಾನು ಮುಸ್ತಾಕ್ ಮತ್ತು ದೀಪಾ ಭಾಸ್ತಿ ಅವರ ಸಾಹಿತ್ಯಗಳು.
ಇದು ಅತ್ಯಂತ ಹೆಮ್ಮೆಯ ವಿಷಯ ಎಂದರು.
ಈ ಸಂದರ್ಭದಲ್ಲಿ ವಿವಿಧ ಸಾಹಿತಿಗಳು, ಸಾಹಿತ್ಯ ಪ್ರೇಮಿಗಳು ಉಪಸ್ಥಿತರಿದ್ಧರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ