Breaking News

ಬಾಲ ಕಾರ್ಮಿಕ ರಿಂದ ದೇಶದ ಅಭಿವೃದ್ಧಿ ಕುಂಠಿತ – ನ್ಯಾಯಾಧೀಶ ರಾಜಣ್ಣ ಸಂಕನ್ನವರ

Spread the love

ಬಾಲ ಕಾರ್ಮಿಕ ರಿಂದ ದೇಶದ ಅಭಿವೃದ್ಧಿ ಕುಂಠಿತ – ನ್ಯಾಯಾಧೀಶ ರಾಜಣ್ಣ ಸಂಕನ್ನವರ
ಬಾಲ ಕಾರ್ಮಿಕರಿಂದ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದು ಹುಕ್ಕೇರಿ ಹಿರಿಯ ಸಿವ್ಹಿಲ್ ನ್ಯಾಯಾಧೀಶ ರಾಜಣ್ಣ ಸಂಕನ್ನವರ ಹೇಳಿದರು. ಹುಕ್ಕೇರಿ ತಾಲೂಕಿನ ಕೊಟಬಾಗಿ ಸರಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.
ಹುಕ್ಕೇರಿ ತಾಲೂಕಾ ಆಡಳಿತ , ಕಾರ್ಮಿಕ ಇಲಾಖೆ, ತಾಲೂಕಾ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನ ವನ್ನು ಮುಖ್ಯೋಪಾಧ್ಯಾಯ ಎಸ್ ಎಂ ಸೋನಾವಣೆ ಯವರ ಅದ್ಯಕ್ಷತೆಯಲ್ಲಿ ಕಿರಿಯ ಸಿವಿಲ್ ನ್ಯಾಯಾಧೀಶ ಆದಿತ್ಯ ಕಲಾಲ್ ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬೆಳಗಾವಿ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೆಶಕಿ ಜ್ಯೋತಿ ಕಾಂತೆ ಮಾತನಾಡಿ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯ ಪಡೆದು ವಿದ್ಯಾಭ್ಯಾಸ ಮಾಡಿ ಉತ್ತಮ ಅಧಿಕಾರಿಗಳಾಗಿ ಸಮಾಜ ಸೇವೆ ಮಾಡಬೇಕು ವಿನಹ: ಬಾಲ ಕಾರ್ಮಿಕರಾಗಿ ತಮ್ಮ ಜೀವನವನ್ನು ಹಾಳು ಮಾಡಿಕೋಳ್ಳಬಾರದು ಎಂದು ಸಲಹೆ ನೀಡಿದರು.
ನಂತರ ಕೊಟಬಾಗಿ ಗ್ರಾಮ ಪಂಚಾಯತ ವತಿಯಿಂದ,ಎಸ್ ಡಿ ಎಂ ಸಿ ಸದಸ್ಯರಿಂದ ಹಾಗೂ ಗ್ರಾಮಸ್ಥರಾದ ರಾಯಪ್ಪಾ ಡೂಗ, ಬಸವರಾಜ ಭೂಸಾರಿ ಮತ್ತು ಘಟಿಗೆಪ್ಪಾ ಪೋಕಳಿ ಯವರು ನ್ಯಾಯಾಧೀಶರನ್ನು ಸತ್ಕರಿಸಿ ಅಭಿನಂದಿಸಿದರು.
ವೇದಿಕೆ ಮೇಲೆ ನ್ಯಾಯವಾದಿಗಳ ಸಂಘದ ಅದ್ಯಕ್ಷ ಕೆ ಬಿ ಕುರಬೇಟ, ಸಿ ಡಿ ಪಿ ಓ ಹರಿಪ್ರಸಾದ, ಕಾರ್ಮಿಕ ಇಲಾಖೆ ಅಧಿಕಾರಿ ನಾಗಪ್ಪಾ ಕಳಸನ್ನವರ, ಸರಕಾರಿ ವಕೀಲ ಎ ಸಿ ಕರೋಶಿ, ಸರಕಾರಿ ಅಭಿಯೋಜಕ ಶೇಖರ ಭಡಗಾಂವೆ, ಉಪಾದ್ಯಕ್ಷ ಬಿ ಎಂ ಜಿನರಾಳೆ, ಎಸ್ ಜಿ ನದಾಫ್, ವಿ ಎಲ್ ಘಸ್ತಿ, ಎ ಎ ಬಾಗೆವಾಡಿ, ಶ್ರೀಮತಿ ಎ ಬಿ ಕುಲಕರ್ಣಿ,ಎಸ್ ವಾಯ್ ಎಗನ್ನವರ, ಆಶಾ ಸಿಂಗಾಡೆ, ಉಪಸ್ಥಿತರಿದ್ದರು.
ನಂತರ ಬಾಲ ಕಾರ್ಮಿಕ ವಿರೊಧಿ ದಿನದ ಅಂಗವಾಗಿ ಜಾಗೃತಿ ಜಾಥಾವನ್ನು ಚಾಲನೆ ನೀಡಿ ಮಾದ್ಯಮಗಳೊಂದಿಗೆ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶ ರಾಜಣ್ಣಾ ಸಂಕನ್ನವರ ಯಾವ ದೇಶದಲ್ಲಿ ಬಾಲ ಕಾರ್ಮಿಕರು ಇರುತ್ತಾರೋ ಆದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುವದಿಲ್ಲಾ ಕಾರಣ ನಮಗಮ ಮಕ್ಕಳನ್ನು ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿ ಮಾಡುವದು ಪ್ರತಿಯೊಬ್ಬರ ಕರ್ತವ್ಯ ವಾಗಿದೆ ಇದಕ್ಕೆ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ ಅದರ ಸದ್ಬಳಿಕೆ ಮಾಡಿಕೊಂಡು ಬಾಲ ಕಾರ್ಮಿಕ ನಿರ್ಮೂಲನೆ ಮಾಡಬೇಕು ಎಂದರು
ಈ ಸಂದರ್ಭದಲ್ಲಿ ಕೋಟಬಾಗಿ ಸರಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲಗಲಿ ಉಪಸ್ಥಿತರಿದ್ದರು.

Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ