Breaking News

ಬೆಳಗಾವಿ | 20 ಗ್ರೇಸ್ ಅಂಕ ನೀಡಲು ಆಗ್ರಹ

Spread the love

ಬೆಳಗಾವಿ: ‘ಉತ್ತರ ಕರ್ನಾಟಕದ ಜಿಲ್ಲೆಗಳ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕನ್ನಡ ವಿಷಯದ ಉತ್ತರಪತ್ರಿಕೆಗಳನ್ನು ಈ ಭಾಗದ ಶಿಕ್ಷಕರಿಂದಲೇ ಮೌಲ್ಯಮಾಪನ ಮಾಡಿಸಬೇಕು’ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ ಸದಸ್ಯ ಇಬ್ರಾಹಿಂ ಎಂ. ಶಂಷೀರ್‌ ಒತ್ತಾಯಿಸಿದ್ದಾರೆ.

ಈ ಬಗ್ಗೆ ಶಿಕ್ಷಣ ಸಚಿವರು ಹಾಗೂ ಪರೀಕ್ಷಾ ಮಂಡಳಿ ನಿರ್ದೇಶಕರಿಗೆ ಪತ್ರ ಬರೆದಿರುವ ಅವರು, ‘ವಿವಿಧ ಭಾಷಿಕರು ಇಲ್ಲಿದ್ದಾರೆ. ಹೀಗಾಗಿ, ಕನ್ನಡದಲ್ಲಿ ಶುದ್ಧ ವ್ಯಾಕರಣ ನಿರೀಕ್ಷಿಸಲಾಗುವುದಿಲ್ಲ. ಆದ್ದರಿಂದ ದಕ್ಷಿಣದವರನ್ನು ನಿಯೋಜಿಸಬಾರದು’ ಎಂದು ಕೋರಿದ್ದಾರೆ.

‘ಕೋವಿಡ್-19 ಸಂಕಷ್ಟ ಇರುವುದರಿಂದ ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ರೀತಿಯಲ್ಲಿ ತೊಂದರೆ ಆಗಿರುವುದರಿಂದಾಗಿ ಎಲ್ಲರಿಗೂ 20 ಗ್ರೇಸ್ ಅಂಕಗಳನ್ನು ನೀಡಬೇಕು’ ಎಂದು ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ

Spread the loveಬೆಂಗಳೂರು: ರಾಮ ಮಂದಿರ ದೇಣಿಗೆ ಹಗರಣವನ್ನು ಬಿಜೆಪಿ ಮುಚ್ಚಿ ಹಾಕೋಕೆ ಪ್ರಯತ್ನ ಮಾಡ್ತಿದೆ ಅಂತ ಗೃಹ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ