Breaking News

ಹಿಂದೂ ಮುಸ್ಲಿಂ ಬಾಂಧವರ ಸೌಹಾರ್ದ ಹಬ್ಬ ಬಕ್ರೀದ – ಜಮಾತ ಅದ್ಯಕ್ಷ ಸಲೀಂ ನದಾಫ್

Spread the love

ಹುಕ್ಕೇರಿ : – ಹಿಂದೂ ಮುಸ್ಲಿಂ ಬಾಂಧವರ ಸೌಹಾರ್ದ ಹಬ್ಬ ಬಕ್ರೀದ – ಜಮಾತ ಅದ್ಯಕ್ಷ ಸಲೀಂ ನದಾಫ್
ಹಿಂದೂ ಮುಸ್ಲಿಂ ಬಾಂಧವರ ಸೌಹಾರ್ದ ಮತ್ತು ತ್ಯಾಗ ಬಲಿದಾನದ ಹಬ್ಬ ಬಕ್ರೀದ ಹಬ್ಬವಾಗಿದೆ ಎಂದು ಹುಕ್ಕೇರಿ ಹನ್ನೂಂದು ಜಮಾತ ಅದ್ಯಕ್ಷ ಸಲಿಂ ನದಾಫ್ ಹೇಳಿದರು ಅವರು ಇಂದು ಹುಕ್ಕೇರಿ ನಗರದ ಈದ್ಗಾ ಮೈದಾನದಲ್ಲಿ ಬಕ್ರೀದ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ನೇರವೇರಿಸಿ ಮಾದ್ಯಮಗಳೊಂದಿಗೆ ಮಾತನಾಡಿದರು.
ಇಸ್ಲಾಂ ಧರ್ಮದಲ್ಲಿ ಪ್ರವಾದಿ ಇಬ್ರಾಹಿಂ ಅಲ್ಲಾಹುನಿಗಾಗಿ ಹೆಂಡತಿ ಮಗುವನ್ನು ತ್ಯಾಗ ಮಾಡಿದ ಹಿನ್ನಲೆಯಲ್ಲಿ ಪ್ರತಿ ವರ್ಷ ಅಲ್ಲಾನ ಪ್ರೀತಿಗಾಗಿ ಭೂಲೋಕದ ಅಕ್ರಮಗಳನ್ನು ತ್ಯಾಗ ಮಾಡುವಂತೆ ನಮ್ಮಲ್ಲಿಯ ಅಹಂ ಅನ್ನು ಬಲಿಕೊಡುವಂತೆ ಬಕ್ರೀದ ಹಬ್ಬ ಆಚರಿಸಲಾಗುತ್ತಿದೆ.
ಹುಕ್ಕೇರಿ ನಗರದ ಸಮಸ್ತ ಮುಸಲ್ಮಾನ ಬಾಂಧವರು ಪಟ್ಟಣದ ಹೋರವಲಯದ ಈದ್ಗಾ ಮೈದಾನದಲ್ಲಿ ಹನ್ನೂಂದು ಜಮಾತ ಮತ್ತು ಅಂಜುಮನ ಕಮೀಟಿ ಸದಸ್ಯರು ಸಾಮೂಹಿಕ ಪ್ರಾರ್ಥನೆ ಮಾಡಿದರು. ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅಂಜುಮನ ಕಮೀಟಿ ಅದ್ಯಕ್ಷ ಬಾಬಾಜಾನ ಖಾಜಿ ಮತ್ತು ಹನ್ನೋಂದು ಜಮಾತ ಅದ್ಯಕ್ಷ ಸಲೀಂ ನದಾಫ್ ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ ಹಬ್ಬವನ್ನು ಇಂದು ಹುಕ್ಕೇರಿ ನಗರದಲ್ಲಿ ಹಿಂದೂ ಮುಸ್ಲಂ ಬಾಂಧವರು ಆಚರಿಸುವ ಮೂಲಕ ಸೌಹಾರ್ದತೆ ಮೇರೆದಿದ್ದಾರೆ , ದೇಶದಲ್ಲಿ ಮಳೆ ಬೆಳೆ ಚನ್ನಾಗಿ ಬಂದು ಎಲ್ಲ ಧರ್ಮಿಯರು ಶಾಂತಿ ಮತ್ತು ಸೌಹಾರ್ದತೆಯಿಂದ ಬಾಳುವಂತೆ ಅಲ್ಲಾಹುವಿನಲ್ಲಿ ಪ್ರರ್ಥನೆ ಮಾಡಲಾಗಿದೆ ಎಂದರು
ನಂತರ ಒಬ್ಬರಿಗೊಬ್ಬರು ಹಬ್ಬದ ಶುಭಾಶಯ ಹಂಚಿಕೊಂಡು ಸಿಹಿ ಭೋಜನ ಸವಿದರು.
ಈ ಸಂದರ್ಭದಲ್ಲಿ ಅಹಮ್ಮದ ಬಾಗವಾನ ಶಬ್ಬೀರ ಸನದಿ, ಇರ್ಷಾದ ಮೋಕಾಶಿ, ನಾಶೀರ ಸುತಾರ, ಕೇಸರ ಮೋಕಾಶಿ, ಜಾವೀದ ನದಾಫ್, ಅಷರಫ್ ಖಾನಜಾದೆ, ಫಾರೂಕ ಮುಲ್ಲಾ, ಹಾಗೂ ಅಂಜುಮನ ಕಮೀಟಿ ಮತ್ತು ಹನ್ನೂಂದು ಜಮಾತ ಸದಸ್ಯರು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ