ತುಮಕೂರು: ಸನ್ನಡತೆ ಆಧಾರದ ಮೇಲೆ 74 ರೌಡಿಶೀಟರ್ಗಳನ್ನು ರೌಡಿಶೀಟರ್ ಪಟ್ಟಿಯಿಂದ ಬಿಡುಗಡೆ ಮಾಡಲಾಗಿದೆ. ಮಂಗಳವಾರ ತುಮಕೂರು ಎಸ್ಪಿ ಕಚೇರಿ ಬಳಿಯಿರುವ ಡಿಆರ್ ಗ್ರೌಂಡ್ನಲ್ಲಿ ರೌಡಿಶೀಟರ್ಗಳ ಸಭೆ ಕರೆಯಲಾಗಿತ್ತು. ಈ ವೇಳೆ, ಎಸ್ಪಿ ಅಶೋಕ್ ಕೆ.ವಿ. ರೌಡಿಶೀಟರ್ಗಳಿಗೆ ಗುಡ್ನ್ಯೂಸ್ ನೀಡಿದ್ದಾರೆ.
ಈ ಆಧಾರದ ಮೇಲೆ ರೌಡಿಶೀಟರ್ ಪಟ್ಟಿಯಿಂದ ಕೈ ಬಿಡಲಾಗುತ್ತಿದೆ; ತುಮಕೂರು ಜಿಲ್ಲೆಯಲ್ಲಿ ಒಟ್ಟು 901 ಜನ ರೌಡಿಶೀಟರ್ಗಳಿದ್ದಾರೆ. ಅವರನ್ನು ಪರಿಶೀಲನೆ ಮಾಡಿದಾಗ ಕೆಲ ರೌಡಿಶೀಟರ್ಗಳು ಕಳೆದ 10 ವರ್ಷಗಳಿಂದ ಯಾವುದೇ ಕೇಸ್ಗಳಲ್ಲಿ ಭಾಗಿಯಾಗಿರಲಿಲ್ಲ. ಜತೆಗೆ ಅವರ ಮೇಲಿದ್ದ ಕೇಸ್ಗಳು ಕೋರ್ಟ್ನಲ್ಲಿ ಖುಲಾಸೆಯಾಗಿವೆ. ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದೇ ತಮ್ಮ ಪಾಡಿಗೆ ಕೆಲಸ ಮಾಡಿಕೊಂಡಿದ್ದ ಹಿನ್ನೆಲೆ ಅಂತವರ ಬಗ್ಗೆ ರಿಪೊರ್ಟ್ ಪಡೆದು ಅವರ ಮೇಲಿದ್ದ ರೌಡಿಶೀಟರ್ನ್ನು ಕ್ಲೋಸ್ ಮಾಡಲಾಗಿದೆ.
ಇದೇ ಪುನರಾವರ್ತನೆ ಆದರೆ ಮತ್ತೆ ಓಪನ್ ಮಾಡ್ತೇವೆ: ಎಚ್ಚರಿಕೆ ನೀಡಿದ ಎಸ್ಪಿ;
“ಒಟ್ಟು 74 ಜನ ಅಪರಾಧಿಗಳನ್ನು ರೌಡಿಶೀಟರ್ ಪಟ್ಟಿಯಿಂದ ಮುಕ್ತಾಯ ಮಾಡಲು ತಿರ್ಮಾನ ಮಾಡಲಾಗಿದೆ. ಹೆದರಿಸೋದು, ಬೆದರಿಸೋದು, ಕ್ರೈಂ ಕೇಸ್ನಲ್ಲಿ ಭಾಗಿಯಾಗೋದು, ಗ್ಯಾಮ್ಲಿಂಗ್, ಲಿಕ್ಕರ್ ಈ ತರಹದ ಪ್ರಕರಣಗಳಲ್ಲಿ ಭಾಗಿಯಾದವರ ಮೇಲೆ ರೌಡಿಶೀಟರ್ ಓಪನ್ ಮಾಡುತ್ತೇವೆ. ಅಪರಾಧಿಗಳನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಲು ಕಾರಣವಿರುತ್ತದೆ. ಅಂತಹವರನ್ನು ಚುನಾವಣೆ ಹಾಗೂ ಗಲಭೆ ಸಮಯದಲ್ಲಿ ಗಡಿಪಾರು ಮಾಡುತ್ತೇವೆ”.
Laxmi News 24×7