Breaking News

ಭಾವುಕರಾಗಿ ಹುಕ್ಕೇರಿ ಯಿಂದ ತೇರಳಿದ ನ್ಯಾಯಾಧೀಶ ರೋಟ್ಟೆರ ಹುಕ್ಕೇರಿ ಹಿರಿಯ ನ್ಯಾಯಾಧೀಶ ಕೆ ಎಸ್ ರೋಟ್ಟೆರ ರವರು ಗುಲಬರ್ಗಾ ನಗರಕ್ಕೆ ವರ್ಗಾವಣೆ

Spread the love

ಹುಕ್ಕೇರಿ : ಭಾವುಕರಾಗಿ ಹುಕ್ಕೇರಿ ಯಿಂದ ತೇರಳಿದ ನ್ಯಾಯಾಧೀಶ ರೋಟ್ಟೆರ
ಹುಕ್ಕೇರಿ ಹಿರಿಯ ನ್ಯಾಯಾಧೀಶ ಕೆ ಎಸ್ ರೋಟ್ಟೆರ ರವರು ಗುಲಬರ್ಗಾ ನಗರಕ್ಕೆ ವರ್ಗಾವಣೆ ಗೊಂಡ ಹಿನ್ನಲೆಯಲ್ಲಿ ಹುಕ್ಕೇರಿ ನ್ಯಾಯವಾದಿಗಳ ಸಂಘದ ವತಿಯಿಂದ ಬಿಳ್ಕೋಡುವ ಸಮಾರಂಭ ಜರುಗಿತು.
ಹುಕ್ಕೇರಿ ನ್ಯಾಯಾಲಯ ಸಭಾ ಭವನದಲ್ಲಿ ಜರುಗಿದ ಸಮಾರಂಭದಲ್ಲಿ ವರ್ಗಾವಣೆ ಗೊಂಡ ಹಿರಿಯ ನ್ಯಾಯಾಧೀಶ ಕೆ ಎಸ್ ರೋಟ್ಟೆರ ಮತ್ತು ಕಿರಿಯ ನ್ಯಾಯಾಧೀಶ ಗುರುಪ್ರಸಾದ ರವರಿಗೆ ನ್ಯಾಯವಾದಿಗಳು ಆತ್ಮಿಯವಾಗಿ ಸತ್ಕರಿಸಿ ಶುಭ ಹಾರಿಸಿದರು.

ಸತ್ಕಾರ ಸ್ವೀಕರಿಸಿ ಮಾತನಾಡಿದ ನ್ಯಾಯಾಧೀಶ ರೋಟ್ಟೆರ ಕಳೆದ ನಾಲ್ಕು ವರ್ಷದಿಂದ ಹುಕ್ಕೇರಿ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ನನಗೆ ಮತ್ತು ನಮ್ಮ ಕುಟುಂಬದವರಿಗೆ ಯಾವದೇ ರೀತಿ ತೊಂದರೆಯಾಗದಂತೆ ಇಲ್ಲಿಯ ನ್ಯಾಯವಾದಿಗಳು ನಡೆದುಕೊಂಡಿದ್ದಾರೆ ಎಂದು ಭಾವುಕರಾಗಿ ತಮ್ಮ ಮನದಾಳದ ಮಾತುಗಳನ್ನಾಡಿ,ಮುಂಬರುವ ದಿನಗಳಲ್ಲಿ ಮತ್ತೆ ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುವ ಸಂದರ್ಭ ಒದಗಿ ಬರಲಿ ಎಂದು ಆಶಯ ವ್ಯಕ್ತಪಡಿಸಿದರು.

ವೇದಿಕೆ ಮೇಲೆ ಸಂಘದ ಉಪಾದ್ಯಕ್ಷ ಬಿ ಎಮ್ ಜಿನರಾಳೆ, ಸರ್ಕಾರಿ ವಕೀಲ ಅನಿಲ ಕರೋಶಿ,ಕಾರ್ಯದರ್ಶಿ ಎಸ್ ಜೆ ನದಾಫ್ ಉಪಸ್ಥಿತರಿದ್ದರು. ನಂತರ ವಕೀಲರ ಸಂಘದ ಅದ್ಯಕ್ಷ ಕಾಡಪ್ಪಾ ಕುರಬೇಟ ಮಾತನಾಡಿ ಕಳೆದ ನಾಲ್ಕು ವರ್ಷದಿಂದ ಒಂದು ದಿನ ಸಹ ರಜೆ ಪಡೆಯದೆ ಸದಾ ಕೋರ್ಟ ಕಲಾಪದಲ್ಲಿ ಭಾಗ ವಹಿಸಿ ನಮ್ಮ ಕಕ್ಷಿದಾರರಿಗೆ ಮನೆ ಬಾಗಿಲಿಗೆ ನ್ಯಾಯ ಕೊಡಿಸುವ ಕಾರ್ಯ ಮಾಡಿದ್ದಾರೆ, ಅವರ ಸೇವೆಗೆ ನಾವು ಸದಾ ಋಣಿಯಾಗಿದ್ದೆವೆ ಎಂದರು
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಬಸವರಾಜ ಹುಂಡೆಕರ, ರಾಮಚಂದ್ರ ಜೋಶಿ, ಪಿ ಆರ್ ಚೌಗಲಾ, ಅನಿಲ ಶೇಟ್ಟಿ, ಬಿ ಕೆ ಮಗೆಣ್ಣವರ, ಆಶಾ ಸಿಂಗಾಡಿ, ಆರ್ ಬಿ ಪಾಟೀಲ, ಎಮ್ ಎಮ್ ಪಾಟೀಲ, ಆರ್ ಬಿ ಚೌಗಲಾ, ಕೆ ಪಿ ಶಿರಗಾಂವಕರ, ಬಿ ಬಿ ಬಾಗಿ, ಬಿ ಬಿ ಪಾಸಪ್ಪಗೋಳ,ಸಂಜೀವ ನಾಗನೂರಿ ಮೊದಲಾದವರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ