ದಾವಣಗೆರೆ: ಉಚ್ಚಾಟಿತ ಶಾಸಕ ಯತ್ನಾಳ್ ಹೊಸ ಪಕ್ಷ ಕಟ್ಟಲು ಬಿಡಲ್ಲ, ಈಗಲೂ ಅವರು ನಮ್ಮ ನಾಯಕರು. ಪಕ್ಷ ಕಟ್ಟಿದರೆ ನಾವು ಹೋಗಲ್ಲ ಎಂದು ಹರಿಹರ ಶಾಸಕ ಬಿ ಪಿ ಹರೀಶ್ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಶಾಸಕ ಹರೀಶ್, ನಾವು ಬಿಜೆಪಿಯಲ್ಲೇ ಇರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಯತ್ನಾಳ್ ನಮ್ಮ ನಾಯಕರು ಹಿಂದೂ ಹುಲಿ ಎಂದು ಪ್ರಸಿದ್ದಿಯಾಗಿದ್ದಾರೆ ಅವರನ್ನು ಪಕ್ಷ ಉಚ್ಚಾಟನೆ ಮಾಡಿದೆ. ನಮ್ಮ ತಂಡ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಬೇಕು ಎಂದು ಹೋರಾಟ ನಡೆಸುತ್ತಿದೆ ಎಂದರು.ಹೊಸ ಪಕ್ಷದ ವಿಚಾರ ಮಾಧ್ಯಮಗಳಲ್ಲಿ ನೋಡಿದ್ದೇವೆ. 2028 ರ ಚುನಾವಣೆಯಲ್ಲಿ ಗೆಲ್ಲಲು ಯತ್ನಾಳ್ ಬೇಕೆಂದು ರಾಷ್ಟ್ರೀಯ ನಾಯಕರಿಗೆ ಮನವರಿಕೆ ಮಾಡುತ್ತೇವೆ. ಹೊಸಪಕ್ಷ ಮಾಡಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ, ಅವರು ಪಕ್ಷ ಕಟ್ಟಿದರೆ ನಾವು ಹೋಗಲ್ಲ ನಾವು ಬಿಜೆಪಿಯಲ್ಲೇ ಇರ್ತೀವಿ. ನಾಯಕರು ಯಾವತ್ತಿದ್ದರೂ ನಾಯಕರೆ ನಮ್ಮ ನಾಯಕರು ಯತ್ನಾಳ್ ಎಂದು ಇದೇ ವೇಳೆ ಶಾಸಕ ಹರೀಶ್ ಹೇಳಿದರು.
ಇನ್ನೆರಡ್ಮೂರು ದಿನಗಳಲ್ಲಿ ದೆಹಲಿಗೆ ಹೋಗ್ತೇವಿ: ಎರಡರಿಂದ ಮೂರು ದಿನದಲ್ಲಿ ದೆಹಲಿಗೆ ಹೋಗ್ತೀವಿ. ಈ ಬಗ್ಗೆ ಹೈಕಮಾಂಡ್ ಮನವರಿಕೆ ಮಾಡುತ್ತೇವೆ. ಯತ್ನಾಳ್ ಅವರನ್ನು ಮತ್ತೆ ಪಕ್ಷಕ್ಕೆ ಕರೆತರುತ್ತೇವೆ. ಇನ್ನು ರಾಜ್ಯಾಧ್ಯಕ್ಷರು ಕಾಂಗ್ರೆಸ್ ವಿರುದ್ಧ ಹೋರಾಡಲು ಸಮರ್ಥರಾಗಿಲ್ಲ. ಹೀಗಾಗಿ ಅವರನ್ನು ಬದಲಾವಣೆ ಮಾಡಬೇಕಿದೆ. ರಾಜ್ಯಾಧ್ಯಕ್ಷರ ಬದಲಾವಣೆ ಮಾಡಬೇಕು ಎಂಬ ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವು ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ಇಡುವುದಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು
Laxmi News 24×7