ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಉಗಾರದ ಬ್ರಾಹ್ಮಣ ಸಮಾಜದ ಮಹಿಳಾ ಮಂಡಲದ ವತಿಯಿಂದ ಮಹಿಳಾ ದಿನಾಚರಣೆ ಆಚರಣೆ.

ಮಹಿಳೆಯರು ಅಂತರಾಳ ವೀರರಾಗಿ, ದೇಶದ ರಾಷ್ಟ್ರಪತಿ, ಕೇಂದ್ರದ ಸಚಿವರು ಸೇರಿ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಪುರುಷರಕ್ಕಿಂತ ಒಂದು ಹೆಜ್ಜೆ ಮಹಿಳೆಯರು ಮುಂದಾಗಿದ್ದಾರೆ. ಈಗ ಮಹಿಳೆಯರು ಅಬಲೇಯರಾಗಿ ಉಳಿದಿಲ್ಲ ಎಂದು ನೆರೆಯ ಮಹಾರಾಷ್ಟ್ರದ ಜೈಸಿಂಗಪೂರ ಪಟ್ಟಣದ ಸಾಮಾಜಿಕ ಕಾರ್ಯಕರ್ತರು ಹಾಗೂ ಮಹಾರಾಷ್ಟ್ರದ ಅಹಿಲಾಬಾಯಿ ಹೂಳಕರ ಪ್ರಶಸ್ತಿ ವಿಜೇತರಾದ ಶ್ರೀಮತಿ ಡಾಕ್ಟರ ಸ್ನೇಹಲ ಕುಲಕರ್ಣಿ ಹೇಳಿದರು.
ಶುಕ್ರವಾರ ರಂದು ಸಂಜೆ ಉಗಾರದ ರಾಘವೇಂದ್ರ ಮಠದ ಸಭಾಭವನದಲ್ಲಿ ಉಗಾರ ಬ್ರಾಹ್ಮಣ ಸಭೆ ವತಿಯಿಂದ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಚರಿಸಿದರು.
ಡಾಕ್ಟರ್ ಸ್ನೇಹಲ ಕುಲಕರ್ಣಿ ಇವರು ಮುಂದುವರೆದು ಮಾತನಾಡುವಾಗ ಎಲ್ಲ ಮಹಿಳೆಯರಿಗೆ ತಮ್ಮ ಜೀವನದಲ್ಲಿ ಯಾವ ರೀತಿ ಪ್ರಗತಿ ಸಾಧಿಸಲು ಪ್ರಯತ್ನಿಸಬೇಕು ಎಂಬ ಅನೇಕ ಉದಾರಣೆಗಳು ನೀಡಿ. ಮಹಿಳೆಯರು ತಮ್ಮ ಜೀವನದಲ್ಲಿ ಒಳ್ಳೆ ದಿನಗಳು ಕಾಣಬೇಕಾದರೆ ಸಂಸಾರದಲ್ಲಿ ತಮ್ಮ ಪುರುಷರೊಂದಿಗೆ ಎಲ್ಲ ರೀತಿ ಸಹಕಾರ ನೀಡಿ ಸಂಸಾರ ರೂಪಿಸಿಕೊಳ್ಳಬೇಕೆಂದು ಸಲಹೆಗಳು ನೀಡಿದರು.
ಉಗಾರ ಬ್ರಾಹ್ಮನ ಸಭೆ ಅಧ್ಯಕ್ಷ ಪ್ರಾಣೇಶ ಕುಲಕರ್ಣಿ, ಮಹಿಳಾ ವಿಭಾಗದ ಅಧ್ಯಕ್ಷೆ ರಚನಾ ದೇಶಪಾಂಡೆ ಇವರ ನೇತೃತ್ವದಲ್ಲಿ ಕಾರ್ಯಕ್ರಮ ಜರಗಿತು. ಉಗಾರ ಪಟ್ಟಣದಲ್ಲಿಯ ಬ್ರಾಹ್ಮಣ ಸಮಾಜದ ಎಲ್ಲ ಮಹಿಳೆಯರು ಒಂದುಗೂಡಿ ಇಲ್ಲಿಗೆ ಹಮ್ಮಿಕೊಂಡ ರಂಗೋಲಿ ಬಿಡಿಸುವುದು ಸ್ಪರ್ಧೆ ಸೇರಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಯಶಸ್ವಿ ಸ್ಪರ್ಧಕರಿಗೆ ಅತಿಥಿಗಳಿಂದ ಬಹುಮಾನ ನೀಡಿ ಗೌರವಿಸಲಾಯಿತು.
ಉಗಾರ ಬ್ರಾಹ್ಮಣಸಭೆ ಸದಸ್ಯರಾದ ರಶ್ಮಿ ನಾಯ್ಕ್ ಸಂಧ್ಯಾ ಇನಾಮದಾರ, ಅಶ್ವಿನಿ ಕುಲಕರ್ಣಿ, ಅತಿಥಿಗಳಾಗಿ ಜೈಸಿಂಗ್ಪೂರ ಬ್ರಾಹ್ಮನ ಸಭೆ ಅಧ್ಯಕ್ಷ ಸುದೀರ ಕುಲಕರ್ಣಿ, ಉಗಾರ ಬ್ರಾಹ್ಮನ ಸಭೆ ಉಪಾಧ್ಯಕ್ಷ ಸಂಜೀವ ದೇಶ್ಪಾಂಡೆ ವಿನಾಯಕ ಗಲಗಲೇ ಧನಂಜಯ ಕುಸ್ನಾಳಕರ ಚಿಂತಾಮಣಿ ಜೋಶಿ ಆರ್ ಕೆ ಪಾಟೀಲ, ಅಣ್ಣೋಸಾಹೇಬ ಸೋಮಣ್ಣಾ, ಪ್ರಕಾಶ ಘಳಸಾಸಿ, ಸಂದೀಪ ದೇವಲ, ರಾಘವೇಂದ್ರ ಮಠದ ಅಧ್ಯಕ್ಷ ಶ್ರೀಪಾದ ಜೋಶಿ, ಸಂದೀಪ್ ನಾಯಿಕ ಮಹಾಲಕ್ಷ್ಮಿ ಭಜನಾ ಮಂಡಳದ ಅಧ್ಯಕ್ಷ ಶ್ರೀಮತಿ ಸುನಿತಾ ನಾಯಕ, ಸುಪ್ರಿಯಾ ದೇಶಮುಖ, ಸರಲಾ ನಿಬಂದೆ, ರಾಧಿಕಾ ಚಾಂದಿ, ಆರತಿ ಕುಲಕರ್ಣಿ ಸೇರಿದಂತೆ ಅನೇಕ ಮಹಿಳೆಯರು ಪಾಲ್ಗೊಂಡು ಕಾರ್ಯಕ್ರಮ ಯಶಸ್ ಗೊಳಿಸಿದರು.

Laxmi News 24×7