Breaking News

ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಮತ್ತೊಂದು ವಿಮಾನ ಸೇವೆ

Spread the love

ನವದೆಹಲಿ/ ಹುಬ್ಬಳ್ಳಿ: ರಾಜ್ಯದ ರಾಜಧಾನಿಗೆ ವಾಣಿಜ್ಯ ನಗರಿಯಾದ ಹುಬ್ಬಳ್ಳಿಯಿಂದ ಈಗ ಮತ್ತೊಂದು ವಿಮಾನಯಾನ ಶೀಘ್ರದಲ್ಲಿಯೇ (ಮಾರ್ಚ್​ 30ರಿಂದ) ಆರಂಭವಾಗಲಿದೆ. ಇದರೊಂದಿಗೆ ದಿನಕ್ಕೆ ಮೂರು ವಿಮಾನಗಳು ಬೆಂಗಳೂರು ಮತ್ತು ಹುಬ್ಬಳ್ಳಿ ಮಧ್ಯ ಸಂಚಾರ ಮಾಡಲಿವೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಇಂದು ಇಂಡಿಗೋ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಈ ಸೇವೆ ಆರಂಭಿಸುವ ಕುರಿತು ಚರ್ಚಿಸಿದರ ಫಲವಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ಈ ಕೆಳಗಿನಂತೆ ವಿಮಾನ ಹಾರಾಟ ನಡೆಸಲಿವೆ:

ಬೆಂಗಳೂರು- ಹುಬ್ಬಳ್ಳಿ 6E7056 ಬೆಳಗ್ಗೆ 9:55 – ಬೆಳಗ್ಗೆ 11:20

ಹುಬ್ಬಳ್ಳಿ – ಬೆಂಗಳೂರು 6E 7263 ಬೆಳಗ್ಗೆ 11:55 – ಮಧ್ಯಾಹ್ನ 1:20

ಹುಬ್ಬಳ್ಳಿ – ಬೆಂಗಳೂರು ನಡುವೆ ಮತ್ತೊಂದು ವಿಮಾನಸೇವೆಗೆ ಅವಕಾಶ ಕಲ್ಪಿಸಿದ್ದಕ್ಕಾಗಿ ಸಚಿವ ಜೋಶಿಯವರು ಇಂಡಿಗೋ ಆಡಳಿತ ವರ್ಗಕ್ಕೆ ಧನ್ಯವಾದ ಹೇಳಿದ್ದಾರೆ. ಇದೇ ಸಮಯದಲ್ಲಿ ಹುಬ್ಬಳ್ಳಿ ಮತ್ತು ಅಹ್ಮದಾಬಾದ್​ ನಡುವೆ ವಿಮಾನಯಾನ ಆರಂಭಿಸಲೂ ಸಹ ಜೋಶಿಯವರು ಇಂಡಿಗೋ ಅಧಿಕಾರಿಗಳಲ್ಲಿ ವಿನಂತಿಸಿದ್ದಾರೆ.

ಈ ಸೇವೆಯಿಂದ ಹುಬ್ಬಳ್ಳಿ – ಧಾರವಾಡ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಕೇಂದ್ರ ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ