Breaking News

ಸಿದ್ಧರಾಮಯ್ಯ-ಡಿಕೆಶಿ ಒಟ್ಟಾಗಿರುವಂತೆ ಖರ್ಗೆ ಸಲಹೆ :ಗೃಹ ಸಚಿವ ಜಿ. ಪರಮೇಶ್ವರ

Spread the love

ಸಿದ್ಧರಾಮಯ್ಯ-ಡಿಕೆಶಿ ಒಟ್ಟಾಗಿರುವಂತೆ ಖರ್ಗೆ ಸಲಹೆ
ಗೃಹ ಸಚಿವ ಜಿ. ಪರಮೇಶ್ವರ ಏನಂದ್ರು???
ರಾಜ್ಯದಲ್ಲಿ ನಾವೆಲ್ಲ ಒಟ್ಟಾಗಿಯೇ ಇದ್ದೇವೆ. ಸಿಎಂ ಮತ್ತು ಡಿಸಿಎಂ ಒಟ್ಟಾಗಿಯೇ ಜನಸೇವೆ ಮಾಡುತ್ತಿದ್ದೇವೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನಾವೆಲ್ಲರೂ ಒಟ್ಟಾಗಿ ಹೋದರೇ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು , ಖರ್ಗೆಯವರು ಯಾವ ಅರ್ಥದಲ್ಲಿ ಹೀಗೆ ಹೇಳಿದ್ದಾರೆ ಗೊತ್ತಿಲ್ಲ ಆದರೇ ನಾವೆಲ್ಲ ಒಟ್ಟಾಗಿಯೇ ಇದ್ದು, ಒಟ್ಟಾಗಿಯೇ ಜನಸೇವೆಯನ್ನು ಮಾಡುತ್ತಿದ್ದೇವೆ ಎಂದರು.
ಎಸ್,ಸಿ.ಪಿ-ಟಿ.ಎಸ್.ಪಿ ಹಣ ಗ್ಯಾರಂಟಿಗಳಿಗೆ ಬಳಸಲು ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಪ್ರತಿ ಇಲಾಖೆಯಲ್ಲೂ ಎಸ್,ಸಿ.ಪಿ-ಟಿ.ಎಸ್.ಪಿ ಅನುದಾನವಿದೆ. ಬಜೆಟ್’ನಲ್ಲಿ ಗೃಹ ಇಲಾಖೆಗೆ ಅವಶ್ಯಕವಿರುವುದನ್ನು ಕೇಳಿದ್ದಾರೆ. ಇನ್ನುಳಿದನ್ನು ಬಜೆಟ್ ಬಿಟ್ಟು ನೀಡಬಹುದು, ಮೋಬಿಲಿಟಿ, ವಾಹನಗಳು, ಶಸ್ತ್ರಾಸ್ತ್ರಗಳು, ಕ್ಯಾಮೆರಾಗಳು ಇನ್ನುಳಿದವುಗಳನ್ನು ನೀಡಿ ಪರಿಣಾಮಕಾರಿಯಾಗಿ ಮಾಡಲಾಗುವುದು ಎಂದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ