Breaking News

ಕುಂಭಮೇಳದಲ್ಲಿ ಬಿವೈ ವಿಜಯೇಂದ್ರ ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಪೊಸ್ಟರ್ ಗೆ ಸ್ನಾನ

Spread the love

ಕುಂಭಮೇಳದಲ್ಲಿ ಬಿವೈ ವಿಜಯೇಂದ್ರ ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಪೊಸ್ಟರ್ ಗೆ ಸ್ನಾನ
ಕುಂಭಮೇಳವು ಇಡೀ ವಿಶ್ವದ ಗಮನಸೆಳೆದಿದೆ. ಉತ್ತರ ಪ್ರದೇಶದ ಪ್ರಯಾಗ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಲಕ್ಷಾಂತರ ಕನ್ನಡಿಗರು ಭಾಗವಹಿಸಿದ್ದಾರೆ.
May be an image of 4 people, car, road and text that says "महाफभ महाकुभ महामुर YIJAYAPUR VIJAYAPURTOPRAYAGRAJ TO PRAYAGRAJ"
ಇತ್ತ ವಿಜಯಪುರ ಜಿಲ್ಲೆಯಿಂದಲೂ ಸಾವಿರಾರು ಜನರು ಭಾಗವಹಿಸಿದ್ದು ಸಂಗಮದಲ್ಲಿ ತಮ್ಮ ಮೆಚ್ಚಿನ ನಾಯಕರ ಭಾವಚಿತ್ರ ತೆಗೆದುಕೊಂಡು ಹೋಗಿ ನದಿಯಲ್ಲಿ ಮುಳುಗಿಸಿ ಸ್ನಾನ ಮಾಡಿಸುತ್ತಿದ್ದಾರೆ.
ಬಿಜೆಪಿಯಲ್ಲಿ ಬಣಗಳ ನಡುವಿನ ಪೈಪೋಟಿ ತೀವ್ರಗೊಂಡಿದೆ. ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನಡುವಿನ ಗೊಂದಲ ಸದ್ದು ಮಾಡುತ್ತಿದೆ.
ಇತ್ತಿಚೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಭಾವಚಿತ್ರವನ್ನು ಅಭಿಮಾನಿಗಳು ಹಿಡಿದು ಮುಂದಿನ ಸಿಎಂ ಎಂದು ಘೋಷಣೆ ಮಾಡಿದ್ದರು‌. ಇದಕ್ಕೆ ಪೈಪೋಟಿ ಎಂಬಂತೆ ವಿಜಯೇಂದ್ರ ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಯವರ ಭಾವಚಿತ್ರವನ್ನು ಗಂಗೆಯಲ್ಲಿ ಮುಳುಗಿಸಿ ಪೂಜೆ ಸಲ್ಲಿಸಿದ್ದಾರೆ‌‌.
ಬಿಜೆಪಿ ಮುಖಂಡ ರಾಜು ಹುನ್ನೂರ ನೇತೃತ್ವದಲ್ಲಿ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹಾಗೂ ಶಾಸಕ ಯತ್ನಾಳರ ಕಟ್ಟಾ ವಿರೋಧಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಯವರ ಪೊಸ್ಟರ್ ನ್ನು ಗಂಗೆಯಲ್ಲಿ ಮುಳುಗಿಸಿದ್ದಾರೆ.
ಇನ್ನೂ ವಿಶೇಷತೆ ಎಂದರೆ ತಾವು ಹೊರಟ ವಾಹನದ ಮೇಲೆ ಪ್ರಧಾನಿ ನರೇಂದ್ರ ಮೋದಿ, ಯುಪಿ ಸಿಎಂ ಆದಿತ್ಯನಾಥ ಯೋಗಿ, ಬಿವೈ ವಿಜಯೇಂದ್ರ ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಇವರ ಭಾವಚಿತ್ರಗಳನ್ನು ಹೊಂದಿರುವ ಪೊಸ್ಟರ್ ಹಾಕಿಸಿ ಪ್ರಯಾಗ್ ರಾಜ್ ತಲುಪಿದ್ದಾರೆ.

Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ