Breaking News

ವಿಶ್ವಗುರುಗೆ ನಮ್ಮ ದೇಶದ ಮತದಾರರ ಪಟ್ಟಿ ಕೊಡಲು ತೊಂದರೆ ಇದೆಯಾ: ಸಚಿವ ಸಂತೋಷ್​ ಲಾಡ್

Spread the love

ಅರಕಲಗೂಡು (ಹಾಸನ) : “ತುಂಬಾ ಪವರ್​ಫುಲ್​ ಪ್ರಧಾನಿ ಆಗಿರುವ ವಿಶ್ವಗುರುಗೆ ನಮ್ಮ ದೇಶದ ಮತದಾರರ ಪಟ್ಟಿಯನ್ನು ಕೊಡಲು ತೊಂದರೆ ಇದೆಯಾ” ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಚಿವ ಸಂತೋಷ್​ ಲಾಡ್​​​ ಅವರು ವಾಗ್ದಾಳಿ ನಡೆಸಿದ್ದಾರೆ.

ಪಟ್ಟಣದಲ್ಲಿ ಖಾಸಗಿಯಾಗಿ ನಡೆಯುತ್ತಿರುವ ಸಿದ್ದರಾಮಯ್ಯ ಕ್ರಿಕೆಟ್ ಕಪ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಬಿಜೆಪಿ ಅಥವಾ ಚುನಾವಣಾ ಕಮಿಷನ್​ನವರಾಗಲಿ ಎಲೆಕ್ಷನ್ ವೋಟಿಂಗ್ ಪ್ಯಾಟರ್ನ್​ಅನ್ನು ಕೊಡದಂತೆ ಕಾನೂನನ್ನೇ ತಂದಿದ್ದಾರೆ. ಈ ಹೊಸ ಕಾನೂನಿನಿಂದಾಗಿ ವೋಟರ್ ಲಿಸ್ಟ್​ ಕೇಳಿದರೇ ಕೊಡುತ್ತಿಲ್ಲ. ಅದಕ್ಕೆ ಬಿಜೆಪಿಯವರನ್ನು ಕೇಳಿನೋಡಿ.

ಈ ಬಗ್ಗೆ ಎಲ್ಲೋ ಒಂದು ರೀತಿಯಲ್ಲಿ ಟ್ಯಾಂಪರಿಂಗ್ ಆಗುತ್ತಿದೆ ಎಂಬುದು ನನ್ನ ನಂಬಿಕೆಯಾಗಿದೆ” ಎಂದು ಸಂಶಯ ವ್ಯಕ್ತಪಡಿಸಿದರು.”ಅಲ್ಲದೆ ವಿಪಕ್ಷಗಳು ಕೂಡ ಈ ಬಗ್ಗೆ ಮಾತನಾಡಿಕೊಳ್ಳುತ್ತಿವೆ. ಚುನಾವಣೆಯಲ್ಲಿ ಸೋತ ಮತ್ತು ಗೆದ್ದ ತಕ್ಷಣ ಇಂತಹ ಮಾತು ಕೇಳಿಬರುತ್ತಿವೆ. ಬರೀ ವೋಟಿಂಗ್​ ಮಷಿನ್​ ಅಲ್ಲ. ಇಡೀ ಸರ್ಕಾರದ ಮಷಿನರಿಯನ್ನೇ ಬಳಕೆ ಮಾಡುತ್ತಿದ್ದಾರೆ. ಕೇಜ್ರಿವಾಲ್​ರನ್ನು ಜೈಲಿಗೆ ಹಾಕಿದರು. ಈ ಬಗ್ಗೆ ಏನೂ ಕಾರಣ ಎಂಬುದು ತಿಳಿದಿಲ್ಲ. ಈ ರೀತಿಯ ಹಲವಾರು ವಿಷಯಗಳು ಇವೆ” ಎಂದು ಲಾಡ್​​ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ