Breaking News

ಸರ್ಕಾರಿ ವೈದ್ಯರ ಎಡವಟ್ಟಿಗೆ 6 ತಿಂಗಳ ಗಂಡು ಮಗು ಸಾವು

Spread the love

ಚಾಮರಾಜನಗರ, : ‘ವೈದ್ಯೋ ನಾರಾಯಣೋ ಹರಿಃ’ ಎಂಬ ಉಕ್ತಿಯಂತೆ ವೈದ್ಯನಾದವನು ದೇವರಿಗೆ ಸಮಾನವಾದವನು. ಆದರೆ ಪ್ರಾಣ ಉಳಿಸಬೇಕಿರುವ ವೈದ್ಯನೇ ಬದುಕಿ ಬಾಳ ಬೇಕಾಗಿದ್ದ ಪುಟ್ಟ ಕಂದನ ಪ್ರಾಣ (death) ತೆಗೆದಿರುವ ಆರೋಪ ಕೇಳಿಬಂದಿದೆ. ವೈದ್ಯ ಮಾಡಿದ ಎಡವಟ್ಟಿಗೆ 6 ತಿಂಗಳ ಗಂಡು ಮಗು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರದಲ್ಲಿ ನಡೆದಿದೆ.

ಸರ್ಕಾರಿ ವೈದ್ಯರ ಎಡವಟ್ಟಿಗೆ 6 ತಿಂಗಳ ಗಂಡು ಮಗು ಸಾವು ಆರೋಪ: ಆಸ್ಪತ್ರೆಯಲ್ಲಿ ಹೈಡ್ರಾಮಾ

ಜಿಲ್ಲೆಯ ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆ ವೈದ್ಯ 6 ತಿಂಗಳ ಮಗುವಿನ ಪ್ರಾಣವನ್ನು ತೆಗೆದಿದ್ದಾನೆ. ಡಾಕ್ಟರ್ ಮಾಡಿದ ಸಣ್ಣದೊಂದು ಎಡವಟ್ಟಿಗೆ ಬದುಕಿ ಬಾಳಬೇಕಾದ 6 ತಿಂಗಳ ಕಂದನ ಪ್ರಾಣ ಪಕ್ಷಿಯೇ ಹಾರಿ ಹೋಗಿದೆ. ತನ್ನ ಮಗುವಿನ ಸಾವಿಗೆ ಕಾರಣವಾದ ವೈದ್ಯನ ವಿರುದ್ದ ಕುಟುಂಬಸ್ಥರು ರೊಚ್ಚಿಗೆದ್ದಿದ್ದು ಸರ್ಕಾರಿ ಆಸ್ಪತ್ರೆಯೇ ರಣಾಂಗಣವಾಗಿ ಮಾರ್ಪಟ್ಟಿತ್ತು.

ಹಂಗಳ ಗ್ರಾಮದ ನಿವಾಸಿಗಳಾದ ಆನಂದ್ ಮತ್ತು ಶುಭಮಾನಸ ದಂಪತಿಯ ಆರು ತಿಂಗಳ ಮಗು ಪ್ರಖ್ಯಾತ್​ಗೆ ಇಂದು ಕಿವಿ ಚುಚ್ಚಿಸೋಕೆ ಮುಂದಾಗಿದ್ದರು. ಆದರೆ ಚಿಕ್ಕ ಕಂದವಾದ ಕಾರಣ ಮಗುವಿಗೆ ನೋವು ಆಗ ಬಾರದು ಎಂಬ ಕಾರಣಕ್ಕೆ ಬೋಮ್ಮಲಾಪೂರ ಸರ್ಕಾರಿ ಆಸ್ಪತ್ರೆಗೆ ಮಗುವನ್ನ ಕರೆದುಕೊಂಡು ಹೋದ ಪೋಷಕರು ಕಿವಿಗೆ ಬೆಂಟ್ ಇಂಜೆಕ್ಷನ್(ಅನಸ್ತೀಷಿಯಾ) ಕೊಡಿಸಿದ್ದಾರೆ. ಈ ಇಂಜೆಕ್ಷನ್ ನೀಡಿದ 10 ನಿಮಿಷದೊಳಗೆ ಮಗುವಿಗೆ ರಿಯಾಕ್ಷನ್ ಆಗಿದೆ. ಇದ್ದಕ್ಕಿದ್ದಂತೆ ಪಿಡ್ಸ್ ಬಂದಿದೆ, ತಕ್ಷಣವೇ ಬೋಮ್ಮಲಾಪುರ ಸರ್ಕಾರಿ ಆಸ್ಪತ್ರೆಯಿಂದ ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಗೆ ಮಗುವನ್ನ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆ ತಲುಪುವ ಮುನ್ನವೆ ಮಗು ಉಸಿರು ಚೆಲ್ಲಿದೆ. ಈ ವಿಚಾರ ತಿಳಿದು ಮೃತ ಮಗುವಿನ ಕುಟುಂಬಸ್ಥರು ರೊಚ್ಚಿಗೆದ್ದು ವೈದ್ಯರಿಗೆ ಕ್ಲಾಸ್ ತೆಗೆದು ಕೊಂಡಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ