Breaking News

ಫೈನಾನ್ಸನವರು ಮನೆಯನ್ನು ಜಪ್ತಿ ಮಾಡಿ ಬಾಣಂತಿ ಮತ್ತು ಮಗುವನ್ನು ಹೊರಗಟ್ಟಿದ್ದ ಕುಟುಂಬಕ್ಕೆ ಮನೆಯನ್ನು ಮರಳಿ ಕೊಡಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Spread the love

ಫೈನಾನ್ಸನವರು ಮನೆಯನ್ನು ಜಪ್ತಿ ಮಾಡಿ ಬಾಣಂತಿ ಮತ್ತು ಮಗುವನ್ನು ಹೊರಗಟ್ಟಿದ್ದ ಕುಟುಂಬಕ್ಕೆ ಮನೆಯನ್ನು ಮರಳಿ ಕೊಡಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈಗ 2 ವರ್ಷದಿಂದ ಕತ್ತಲಲ್ಲಿದ್ದ ಮನೆಯನ್ನು ಬೆಳಗಿಸಿದ್ದಾರೆ.
ಫೈನಾನ್ಸನವರು ಮನೆಯನ್ನು ಜಪ್ತಿ ಮಾಡಿ ಬಾಣಂತಿ ಮತ್ತು ಮಗು ಹಾಗೂ ಕುಟುಂಬವನ್ನು ಹೊರಗಟ್ಟಿದ್ದ ಪ್ರಕರಣ ಬೆಳಗಾವಿ ತಾಲೂಕಿನ ತಾರೀಹಾಳ ಗ್ರಾಮದಲ್ಲಿ ಬೆಳಕಿಗೆ ಬಂದಿತ್ತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಮ್ಮ ಆಪ್ತರಾದ ಮಹಾಂತೇಶ ಹಿರೇಮಠ ಅವರ ಮೂಲಕ ಫೈನಾನ್ಸನವರೊಂದಿಗೆ ಮಾತನಾಡಿ ಜಪ್ತಿಯಾದ ಮನೆಯನ್ನು ಮರಳಿ ಕೊಡಿಸಿದ್ದರು.
ಈಗ 2 ವರ್ಷದಿಂದ ಕತ್ತಲಲ್ಲಿ ಜೀವನ ದೂಡುತ್ತಿದ್ದ ಕುಟುಂಬಕ್ಕೆ ಕಡಿತಗೊಂಡ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿ ಮತ್ತೊಮ್ಮೆ ತಮ್ಮ ಸಹಾಯದ ಹಸ್ತವನ್ನು ಚಾಚಿದ್ದು, ಲೋಹಾರ್ ಕುಟುಂಬದವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಅವರ ಆಪ್ತ ಮಹಾಂತೇಶ ಹಿರೇಮಠ ಅವರ ಕಾರ್ಯಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ