Breaking News

ತುಂಗಭದ್ರಾ ನೀರು ಹಸಿರು ಬಣ್ಣಕ್ಕೆ ತಿರುಗಿದ್ಯಾಕೆ?

Spread the love

ಗದಗ, : ಆರು ಜಿಲ್ಲೆಯ ಜೀವನದಿ ತುಂಗಭದ್ರಾ (Tungabhadra) ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಆದರೆ ನದಿಯ ಬಣ್ಣ ಮೂರು ಜಿಲ್ಲೆಯ ಜನರನ್ನು ಕಂಗಾಲಾಗಿಸಿದೆ. ಈ ವಿಷಯ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ.

ಹೀಗಾಗಿ ನದಿ ಹಸಿರು ಬಣ್ಣಕ್ಕೆ ತಿರುಗಲು ವಿಜಯನಗರ ಶುಗರ್ ಫ್ಯಾಕ್ಟರಿಯೇ ಕಾರಣವೆಂಬ ಬಲವಾದ ಅನುಮಾನ ಕಾಡಿದೆ. ಹೀಗಾಗಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಖಾರ್ಕಾನೆಗೆ ನೋಟಿಸ್ ಕೊಟ್ಟಿದೆ.

ಹೀಗಾಗಿ ಕದ್ದುಮುಚ್ಚಿ ತ್ಯಾಜ್ಯ ಬೇಕಾಬಿಟ್ಟಿ ಹರಿಬಿಟ್ಟ ಕಾರ್ಖಾನೆ ಆಡಳಿತ ಮಂಡಳಿಗೆ ಢವಢವ ಶುರುವಾಗಿದೆ. ಅಷ್ಟೇ ಅಲ್ಲ ಕಾರ್ಖಾನೆ ವಿರುದ್ಧ ಸಮರ ಸಾರಲು ಜಿಲ್ಲಾಡಳಿತ ಸನ್ನದ್ಧವಾಗಿದೆ.ರುಚಿಕಟ್ಟಾಗಿದ್ದ ತುಂಗಭದ್ರೆ ನೀರು ಈಗ ಸಂಪೂರ್ಣ ಕಲುಷಿತವಾಗಿದೆ. ಇಡೀ ನದಿ ಹಸಿರು ಬಣಕ್ಕೆ ತಿರುಗಿದೆ.

ಕಳೆದ 20 ದಿನಗಳಿಂದ ಹಸಿರು ಬಣ್ಣಕ್ಕೆ ತಿರುಗಿದ ನದಿ ನೀರು ನೋಡಿ ನದಿ ತೀರದ ಜನ್ರು ಕಂಗಾಲಾಗಿದ್ದಾರೆ. ಬಳಿಕ ಎಚ್ಚೆತ್ತ ಜಿಲ್ಲಾಡಳಿತ ಈ ವಿಷಯ ಗಂಭೀರವಾಗಿ ಪರಿಗಣಿಸಿದೆ ಅಂತ ಕಾನೂನು ಸಚಿವರು ಹೇಳಿದ್ದಾರೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ