Breaking News

ಯಲ್ಲಾಪುರ ಭೀಕರ ಅಪಘಾತ:ಹತ್ತೂ ಮೃತರದ್ದು ಒಂದೊಂದು ಕಥೆ.

Spread the love

ಹಾವೇರಿ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ತಡರಾತ್ರಿ ನಡೆದ ಭೀಕರ ಅಪಘಾತದಲ್ಲಿ ಮೃತಪಟ್ಟವರೆಲ್ಲರೂ ಹಾವೇರಿ ಜಿಲ್ಲೆಯ ಸವಣೂರಿನವರು. ಅಪಘಾತದಲ್ಲಿ ಮೃತಪಟ್ಟ ಹತ್ತೂ ಮಂದಿಯದ್ದು ಒಂದೊಂದು ಕಥೆ. ಒಬ್ಬ ಮನೆಗೆ ಆಧಾರವಾಗಿದ್ದ, ಇನ್ನೊಬ್ಬ ತಂದೆಗೆ ಆಸರೆಯಾಗಲು ಎದೆ ಎತ್ತರಕ್ಕೆ ಬೆಳೆದು ನಿಂತಿದ್ದ, ಅದೆಷ್ಟೋ ಕನಸು ಕಂಡಿದ್ದ ಮನೆ ಮಕ್ಕಳು ವಿಧಿಯ ಕ್ರೂರ ಲೀಲೆಗೆ ಬಲಿಯಾಗಿದ್ದಾರೆ. ಸವಣೂರಿನಲ್ಲಿ ದುಃಖ ಮಡುಗಟ್ಟಿದೆ.HAVERI  YELLAPUR  LORRY ACCIDENT  10 KILLED IN LORRY ACCIDENT

ಹೌದು, ಅಪಘಾತದಿಂದ ಪ್ರಾಣ ಕಳೆದುಕೊಂಡ ಒಬ್ಬರ ಪತ್ನಿ ಗರ್ಭಿಣಿ, ಮತ್ತೊರ್ವನ ಮದುವೆಯಾಗಿ ಕೇವಲ ನಾಲ್ಕು ತಿಂಗಳಾಗಿವೆಯಷ್ಟೇ. ಇನ್ನೊಂದು ಕುಟುಂಬದಲ್ಲಿ ಸಣ್ಣ-ಸಣ್ಣ ಮಕ್ಕಳಿವೆ. ಅವುಗಳನ್ನು ನೋಡಿಕೊಳ್ಳುವರಾರು ಎಂಬ ಚಿಂತೆ. ಇದಕ್ಕಿಂತಲೂ ಘನಘೋರವೆಂದರೆ ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿದ್ದಾರೆ. ಈ ಮನೆಯಲ್ಲಂತೂ ಆಕ್ರಂದನವನ್ನ ನೋಡಲಾಗುತ್ತಿಲ್ಲ.

ಎಂದೂ ಕಾಣದ ಸೂತಕ ಛಾಯೆ: ಹಿಂದೆಂದೂ ಕಾಣದ ಸೂತಕದ ಛಾಯೆ ಸವಣೂರು ಪಟ್ಟಣದಲ್ಲಿ ಆವರಿಸಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತರ ಮನೆಯ ಮುಂದೆ ಜನಸಾಗರವೇ ಹರಿದು ಬಂದಿದೆ. ಕಳೆದುಕೊಂಡ ನೋವನ್ನು ಅರಗಿಸಿಕೊಳ್ಳಲಾಗದೇ ಮನೆಯೊಳಗೆ ಹೆಣ್ಣುಮಕ್ಕಳು ಕಣ್ಣೀರು ಹಾಕುತ್ತಿರುವ ದೃಶ್ಯ ಎಂಥವರ ಮನ ಕಲುಕುವಂತಿದೆ.

ಜೀವನೋಪಾಯಕ್ಕೆ ಹಣ್ಣು- ತರಕಾರಿ ಮಾರಿಕೊಂಡಿದ್ದ ಜನ: ಜೀವನೋಪಾಯಕ್ಕೆ ಹಣ್ಣು, ತರಕಾರಿ ವ್ಯಾಪಾರ ಮಾಡಿಕೊಂಡಿದ್ದ 10 ಜನರ ದುರ್ಮರಣದಿಂದ ಕುಟುಂಬಗಳ ಆಧಾರಸ್ಥಂಭವೇ ಕಳಚಿ ಬಿದ್ದಿದೆ. ಸರ್ಕಾರ ತಮಗೆ ಸೂಕ್ತ ಪರಿಹಾರ ನೀಡಬೇಕು, ನೆರವಿಗೆ ಬರುವಂತೆ ಈ ಬಡ ಕುಟುಂಬಗಳು ಮನವಿ ಮಾಡಿಕೊಳ್ಳುತ್ತಿವೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ