Breaking News

ಮುಂದಿನ ತಿಂಗಳು ಜುಲೈ 1 ರಿಂದ 15 ವರೆಗೆ ನಡೆಯಬೇಕಿದ್ದ ಸಿಬಿಎಸ್ಇ 10 ಮತ್ತು 12 ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸಿ ಸಿಬಿಎಸ್​ಇ ಬೋರ್ಡ್ ಆದೇಶ ಹೊರಡಿಸಿದೆ.

Spread the love

ಹೊಸದಿಲ್ಲಿ: ಮುಂದಿನ ತಿಂಗಳು ಜುಲೈ 1 ರಿಂದ 15 ವರೆಗೆ ನಡೆಯಬೇಕಿದ್ದ ಸಿಬಿಎಸ್ಇ 10 ಮತ್ತು 12 ತರಗತಿಯ ಪರೀಕ್ಷೆಗಳನ್ನು ರದ್ದುಗೊಳಿಸಿ ಸಿಬಿಎಸ್​ಇ ಬೋರ್ಡ್ ಆದೇಶ ಹೊರಡಿಸಿದೆ.

ಕೊರೊನಾ ಸೋಂಕು ಭೀತಿ ಲಾಕ್ ಡೌನ್ ಜಾರಿದ ಹಿನ್ನೆಲೆ ಹಲವು ಬಾರಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಜುಲೈ ನಲ್ಲಿ ಪರೀಕ್ಷೆ ನಡೆಸಲು ಬೋರ್ಡ್ ತಯಾರಿ ನಡೆಸಿತ್ತು. ಒಟ್ಟು 36 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗಾಗಿ ತಯಾರಿ ನಡೆಸಿದ್ದರು. ಸದ್ಯ ಇದೀಗ ದಿಢೀರ್ ಪರೀಕ್ಷೆ ರದ್ದು ಪಡಿಸಲಾಗಿದೆ.

ಕೊನೆಯ ಮೂರು ಆಂತರಿಕ ಪರೀಕ್ಷೆ ಅಂಕಗಳ ಮೇಲೆ ಫಲಿತಾಂಶ ನೀಡಲು ಬೋರ್ಡ್​ ನಿರ್ಧಾರ ಮಾಡಿದೆ ಎನ್ನಲಾಗಿದೆ.

ಮಹಾರಾಷ್ಟ್ರ, ತಮಿಳುನಾಡು ಮತ್ತು ದೆಹಲಿಯಲ್ಲಿ ಪರೀಕ್ಷೆಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ದೇಶದಾದ್ಯಂತ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ ಎಂದು ಸಿಬಿಎಸ್​ಇ ಬೋರ್ಡ್​ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂಕೋರ್ಟ್​ಗೆ ಮಾಹಿತಿ ನೀಡಿದ್ದಾರೆ ಎನ್ನುವ ಮಾಹಿತಿ ಇದೆ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ