Breaking News

ಮಕರ ಸಂಕ್ರಮಣ ಹಿನ್ನೆಲೆ, ಲೋಕ ಕಲ್ಯಾಣಕ್ಕಾಗಿ ಶ್ರೀಶೈಲ್ ಜಗದ್ಗುರುಗಳಿಂದ ಕೃಷ್ಣಾ ನದಿಯ ಪುಣ್ಯ ಸ್ನಾನ

Spread the love

ಚಿಕ್ಕೋಡಿ:ಲೋಕಕಲ್ಯಾಣಕ್ಕಾಗಿ ಹಾಗೂ ಭಕ್ತರ ಪಾಪಗಳು ನಿವಾರಣೆಯಾಗಿ ಸಕಲ ಸುಖ ಪ್ರಾಪ್ತಿಯಾಗಲೆಂದು ಶ್ರೀಶೈಲ್ ಜಗದ್ಗುರು ಡಾ!ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಯವರಿಂದ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಸಕಲ ಭಕ್ತಾದಿಗಳೊಂದಿಗೆ ಪುಣ್ಯಸ್ಥಾನ ಜರುಗಿತು.
ಇಂದು ಸಂಕ್ರಾತಿ ದಿನದಂದು ಸೂರ್ಯನೂ ದಕ್ಷಿಣದಿಂದ-ಉತ್ತರ ದಿಕ್ಕಿಗೆ ಪ್ರಯಾಣ ಬೆಳೆಸುವ ಶುಭದಿನ.ಭಕ್ತರು ಸಂಕ್ರಾಂತಿ ದಿನದಂದು ಪುಣ್ಯಕ್ಷೇತ್ರಗಳ ನದಿಯ ತೀರದಲ್ಲಿ ಜದ್ಗುರುಗಳ ಪಾದದಿಂದ ನೀರು ಹಾಕಿಕೊಳ್ಳುವುದರಿಂದ ಭಕ್ತರ ಸಕಲ ತೊಂದರೆಗಳು ನಿವಾರಣೆಯಾಗಿ,ಸಕಲ ಸೌಭಾಗ್ಯ ಪ್ರಾಪ್ತಿಯಾಗುತ್ತದೆ. ಲೋಕಕಲ್ಯಾಣಕ್ಕಾಗಿ ಶ್ರೀಶೈಲ್ ಜದ್ಗುರುಗಳ ಲೋಕಕಲ್ಯಾಣಕ್ಕಾಗಿ ಕೃಷ್ಣಾನದಿಯ ತೀರದಲ್ಲಿ ಪುಣ್ಯ ಜರುಗಿತು ಹಾಗೂ ಸುಮಾರು 2 ಸಾವಿರ ಭಕ್ತರು ಕೃಷ್ಣಾನದಿಯಲ್ಲಿ ಸ್ನಾನಮಾಡಿ ಪಾವನರಾದರು.ಬಳಿಕ ಭಕ್ತರ ಉಧ್ದಾರಕ್ಕಾಗಿ ಶ್ರೀಶೈಲ್ ಜದ್ಗುರುಗಳ ಸಾನಿಧ್ಯದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಜರುಗಿತು. ಬಳಿಕ ಭಕ್ತಾದಿಗಳಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ