Breaking News

ಗಾಂಜಾ ನಶೆಯಲ್ಲಿ ಗೋಕಾಕ ಯುವಜನ,

Spread the love

ಗಾಂಜಾ ನಶೆಯಲ್ಲಿ ಗೋಕಾಕ ಯುವಜನ, ಪೆಡ್ಲರಗಳಿಗೆ ಕಡಿವಾಣ ಯಾವಾಗ,

ಪತ್ರಿಕೆಗಳಲ್ಲಿ ಗಾಂಜಾ ಶಿರ್ಷಿಕೆ ಬಂದಾಗಲೆ ಎಚ್ಚರಾದ್ರಾ ಗೋಕಾಕ ಪೋಲೀಸ್ರು ಯಾಕೆ,,?

ಗೋಕಾಕ : ನಗರದಲ್ಲಿ ಗಾಂಜಾ ಸೇವನೆಗಳಂತಹ ಚಟಕ್ಕೆ ಯುವ ಜನರು ದಾಸರಾಗುತ್ತಿದ್ದಾರೆ. ದುಶ್ಚಟಗಳ ಸುಳಿಯಲ್ಲಿ ಸಿಲುಕಿ ನಶೆಯಲ್ಲಿ ಕಳ್ಳತನದ ಮಾರ್ಗ ಹಿಡಿದು ಕಳ್ಳತನ ಪ್ರಕರಣಗಳು ಹೆಚ್ಚಾಗುತಿದ್ದರೂ ಪೋಲಿಸ್ ಠಾಣೆಯಲ್ಲಿ ದಾಖಲಾಗುತ್ತಿಲ್ಲ.

ಪೋಲಿಸರು ಗಾಂಜಾ ನಶೆಯ ಕಾರಣಗಳನ್ನು ನೀಡಿ ಕಳ್ಳರ ಮೇಲೆ ಪ್ರಕರಣ ದಾಖಲಿಸುತ್ತಿಲ್ಲ.ಇದರಿಂದ ಗಾಂಜಾ ನಶೆಯಲ್ಲಿ ಯುವಕರು ಮತ್ತಷ್ಟು ಕಳ್ಳತನ‌ಕ್ಕೆ ಕೈ ಹಾಕುತಿದ್ದಾರೆ.

ಕೆಲವು ದಿನಗಳ ಹಿಂದೆ ಗಾಂಜಾ ನಶೆಯಲ್ಲಿ ಮನೆಯೊಂದರಲ್ಲಿ ಕಳ್ಳತನ‌ ಮಾಡಿದವನನ್ನ ಸಾರ್ವಜನಿಕರು ಪೋಲಿಸ ಸ್ಟೇಷನಗೆ ಒಪ್ಪಿಸಿದರೆ ಆತನ ಮೇಲೆ ಯಾವುದೆ ಪ್ರಕರಣ ದಾಖಲಿಸದೆ ಸಂಜೆ ಕಳ್ಳನನ್ನು ಹೊರಬಿಟ್ಟಿದ್ದಾರೆ. ಇವತ್ತು ಅದೆ ಕಳ್ಳರು ಮತ್ತೆ ಕಳ್ಳತನಕ್ಕೆ ಇಳಿದಿದ್ದಾರೆ.ಅಷ್ಟೆ ಅಲ್ಲ ಗಾಂಜಾ ಬಗ್ಗೆ ಪೇಸಬುಕನಲ್ಲಿ ಕಮೆಂಟ ಮಾಡಿದವನನ್ನು ಪೋಲಿಸರು ಸ್ಟೇಷನಗೆ ಕರೆಯಿಸಿ ತರಾಟೆಗೆ ತೆಗೆದುಕೊಂಡಿದ್ದು ಸುಳ್ಳೆನಲ್ಲ.

ನಗರದಲ್ಲಿ 15 ರಿಂದ 25 ವರ್ಷದೊಳಗಿನ ಯುವ ಜನರು ಗಾಂಜಾ ಚಟಕ್ಕೆ ಬಿದ್ದಿದ್ದಾರೆ. ನಿರಾವರಿ ಇಲಾಖೆಯ ಬಿದ್ದ ಗೊಡೆಗಳ ಹತ್ತಿರ ರಾತ್ರಿ 9 ಗಂಟೆಯಾದರೆ ಸಾಕು ನಿರ್ಜನ ಪ್ರದೇಶವಾಗಿದ್ದರಿಂದ ಯುವಕರು ಗುಂಪು ಕಟ್ಟಿಕೊಂಡು ಗಾಂಜಾ ನಶೆ ಏರಿಸಿಕೊಳ್ಳುತ್ತಿದ್ದಾರೆ. ನಗರದ ಸಿದ್ದೇಶ್ವರ ದೇವಸ್ಥಾನದ ಹತ್ತಿರದ ಪ್ರದೇಶದಲ್ಲಿ ಗಾಂಜಾ ನಶೆಯಲ್ಲಿ ಹೆಣ್ಣು ಮಕ್ಕಳಿಗೆ ಚುಡಾಯಿಸುತ್ತಿದ್ದರಿಂದ ಈ ಮಾರ್ಗದಲ್ಲಿ ಶಾಲಾ ಕಾಲೇಜಿನ‌ ಮಕ್ಕಳು ಜೀವ ಭಯದಲ್ಲಿ ಹಾಯ್ದು ಹೊಗುವ ಪರಿಸ್ಥಿತಿ ಬಂದೊದಗಿದೆ. ಬುದ್ದ ನಗರ, ಎ,ಪಿ,ಎಮ್,ಸಿ, ಕಾಲೇಜು ಮೈದಾನ ,ಕೊಳವಿ ಹನುಮಾನ ದೇವಸ್ಥಾನ,ಮಸ್ತಾನಸಾಬ ದರ್ಗಾ ಅಕ್ಕ ಪಕ್ಕ ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ. ಕೊಳವಿ ಹನುಮಾನ ದೇವಸ್ಥಾನದ ಮತ್ತು ಮಸ್ತಾನಸಾಬ ದರ್ಗಾ ಹತ್ತಿರ ಇರುವ ಕೆಲವು ಅಂಗಡಿಗಳಲ್ಲಿ ಗ್ರಾಂ ಲೆಕ್ಕದಲ್ಲಿ
ಮಾದಕ ದ್ರವ್ಯ ಮಾರಾಟ , ಗಾಂಜಾ
ರಾಜಾ ರೋಷವಾಗಿ ಮಾರಾಟವಾಗುತ್ತಿದೆ.
ಗಾಂಜಾ ಕಿಂಗ್ ಪಿನ್ ಯಾರು ಎಂಬುದು ಎಲ್ಲರಿಗೂ ಗೊತ್ತಿದ್ದರೂ ಗೋಕಾಕ ನಗರ ಪೋಲಿಸ್ ಠಾಣೆಯವರಿಗೆ ಮಾತ್ರ ಗೊತ್ತಿಲ್ಲದಿರುವುದು ವಿಶೇಷ.

ಗೋಕಾಕ ಸಮುದಾಯ ಭವನ ರಸ್ತೆಯಲ್ಲಿ ಯುವಕರು ಗಾಂಜಾ ನಶೆಯಲ್ಲಿ ಬೈಕಗಳನ್ನು ಮನಬಂದತೆ ಓಡಿಸುತ್ತಿದ್ದಾರೆ. ಪೊಲೀಸರು ಇದಕ್ಕೆ ಕಡಿವಾಣ ಹಾಕಬೇಕು. ಗಾಂಜಾ ಹೊರ ಜಿಲ್ಲೆಯಿಂದ ಬರುವುದಿಲ್ಲ. ನಮ್ಮ ಗೋಕಾಕ ನಗರದ ಗಾಂಜಾ ಕಿಂಗ ಪಿನ ನಿಂದಲೆ ಸಿಗುತ್ತದೆ. ಈಗಿನ ಯುವ ಜನಾಂಗ,ಶಾಲಾ ಮಕ್ಕಳು ಈ ದುಶ್ಚಟಕ್ಕೆ ಬಲಿಯಾಗುವುದನ್ನು ಪೋಲಿಸರು ತಪ್ಪಿಸಬೇಕಾಗಿತ್ತು,ಆದರೆ ಹಾಗೆ ಮಾಡದಿರುವುದೆ ದುಂಖಕರ ಸಂಗತಿಯಾಗಿದೆ.

ಪೋಲಿಸರಿಗೆ ಗಾಂಜಾ ಪೆಡ್ಲೆರಗಳ ಬಗ್ಗೆ ಮಾಹಿತಿ ಇದ್ದರೂ ಸಹ ಪತ್ರಿಕೆಗಳಲ್ಲಿ ಗಾಂಜಾ ಬಗ್ಗೆ ಶಿರ್ಷಿಕೆ ಬಂದಾಗಲೆ ಕಾಟಾಚಾರಾಕ್ಕಾಗಿ ಮೂರು ಜನರ ಮೇಲೆ ಪ್ರಕರಣ ದಾಖಲಿಸಿಕೊಂಡು ತಮ್ಮ ಕುರುಡ ಜಾಣತನ ತೊರಿಸಿದ್ದಾರೆ.

ಇದೆ ರೀತಿ ಗೋಕಾಕ‌ನಗರದಲ್ಲಿ ಗಾಂಜಾ ಪ್ರಕರಣಗಳು ಹೆಚ್ಚಾಗುತಿದ್ದರೆ.
ಮುಂದಿನ ದಿನಮಾನದಲ್ಲಿ ಕರದಂಟು ನಾಡೆ ಎಂದು ಪ್ರಸಿದ್ದಿ ಪಡೆದಿರುವ ಗೋಕಾಕ ನಗರಕ್ಕೆ ಬೇರೆ ಹೆಸರು ಬಂದರು ಬರಬಹುದು.ಇನ್ನಾದರೂ ಗೋಕಾಕ ನಗರ ಪೋಲಿಸರು ಗಾಂಜಾ ಮಾರಾಟ ತಡೆದು ಪೆಡ್ಲರಗಳಿಗೆ ಕಡಿವಾಣ ಹಾಕಬೇಕಾಗದೆ.


Spread the love

About Laxminews 24x7

Check Also

ಫೆ.9ರಿಂದ ಮೆಟ್ರೋ ದರ ಏರಿಕೆಗೆ ಸರ್ಕಾರ ಒಪ್ಪಿಗೆ?

Spread the loveಬೆಂಗಳೂರು: ಮೆಟ್ರೋ  ಪ್ರಯಾಣಿಕರಿಗೆ ಮತ್ತೊಮ್ಮೆ ಶಾಕ್ ಎದುರಾಗಿದೆ. ಫೆಬ್ರವರಿ 9ರಿಂದ ಮತ್ತೆ ಮೆಟ್ರೋ ದರ ಏರಿಕೆಯಾಗುವ ಸಾಧ್ಯತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ