Breaking News

ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ಆರಂಭಿಸಿ…. ಬೆಳಗಾವಿ ಮಹಾಪಾಲಿಕೆ ನಾಲಾ ಕಾಮಗಾರಿಗೆ ವಡಗಾಂವ ಆನಂದನಗರದ ರಹಿವಾಸಿಗಳ ತೀವ್ರ ವಿರೋಧ…

Spread the love

ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ಆರಂಭಿಸಿ….
ಬೆಳಗಾವಿ ಮಹಾಪಾಲಿಕೆ ನೀತಿಗೆ ಖಂಡನೆ
ನಾಲಾ ಕಾಮಗಾರಿಗೆ ತೀವ್ರ ವಿರೋಧ…
ವಡಗಾಂವ ಆನಂದನಗರದ ರಹಿವಾಸಿಗಳಿಂದ ಅಸಮಾಧಾನ

ಬೆಳಗಾವಿ ವಡಗಾಂವನ ಆನಂದ ನಗರದ 2ನೇ ಅಡ್ಡ ರಸ್ತೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ ನಿರ್ಮಿಸಲಾಗುತ್ತಿರುವ ನಾಲಾ ಕಾಮಗಾರಿಗೆ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಯಾರಿಗೂ ನೋಟಿಸ್ ನೀಡದೇ ಏಕಾಏಕಿ ಮಾರ್ಕಿಂಗ್ ಮಾಡಿ ಕಾಮಗಾರಿ ಆರಂಭಿಸಿದ್ದು, ಜನರಲ್ಲಿ ಗೊಂದಲವನ್ನು ಮೂಡಿಸಿದೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಕಾನೂನುಬದ್ಧ ರೀತಿಯಾಗಿ ಕಾಮಗಾರಿಯನ್ನು ಆರಂಭಿಸಬೇಕೆಂದು ಇಲ್ಲಿನ ರಹಿವಾಸಿಗಳು ಆಗ್ರಹಿಸಿದ್ದಾರೆ.

ಬೆಳಗಾವಿ ವಡಗಾಂವನ ಆನಂದ ನಗರದ 2ನೇ ಅಡ್ಡ ರಸ್ತೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ ನಿರ್ಮಿಸಲಾಗುತ್ತಿರುವ ನಾಲಾ ಕಾಮಗಾರಿಗೆ ಜನರಿಂದ ಮತ್ತೇ ತೀವ್ರ ವಿರೋಧ ವ್ಯಕ್ತವಾಗಿದೆ. ಕಾಗದ ಪತ್ರಗಳಲ್ಲಿ ಎಲ್ಲಿಯೂ ನಾಲೆಯ ಉಲ್ಲೇಖವಿಲ್ಲ. 15 ದಿನದ ಮೊದಲು ಮಹಾಪಾಲಿಕೆಯಿಂದ ನೋಟಿಸು ನೀಡಿ, ನಮ್ಮ ಅಭಿಪ್ರಾಯವನ್ನು ಪಡೆದು ಪರಿಹಾರ ವಿತರಿಸಿ ಕಾಮಗಾರಿಯನ್ನು ಆರಂಭಿಸಬೇಕಿತ್ತು. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿಯನ್ನು ಆರಂಭಿಸಬೇಕೆಂದು ಆಗ್ರಹಿಸಲಾಗಿದೆ. ನೀರಿನ ಸಮಸ್ಯೆಯನ್ನು ನೀಗಿಸಲು ಇಲ್ಲಿನ ರಹಿವಾಸಿಗಳು ಬದ್ಧರಾಗಿದ್ದೇವೆ. ಆದರೇ ಕಾನೂನು ಬಾಹಿರವಾಗಿ ಮಾರ್ಕಿಂಗ್ ಮಾಡಿ ಜನರಲ್ಲಿ ಗೊಂದಲವನ್ನು ನಿರ್ಮಿಸಲಾಗಿದೆ. ಕಾನೂನುಬದ್ಧ ಕಾಗದಪತ್ರಗಳನ್ನು ತಂದು ನಿಮ್ಮ ಕಾಮಗಾರಿಯನ್ನು ಆರಂಭಿಸಿ ಎಂದು ವಡಗಾಂವ, ಆನಂದ ನಗರ ರಹಿವಾಸಿಗಳ ಸಂಘದ ಅಧ್ಯಕ್ಷ ಸಂತೋಸ ಪವಾರ್ ಅವರು ಆಗ್ರಹಿಸಿದರು.

ಇನ್ನು ವಡಗಾಂವ ಆನಂದ ನಗರ, 2ನೇ ಅಡ್ಡ ರಸ್ತೆ ರಹಿವಾಸಿ ಸುನೀಲ್ ದಂಡಕರ ಅವರು ಕಳೆದ ಹಲವಾರು ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ಮೊದಲೂ ನೀಡಿದ ಮ್ಯಾಪಿನ ಪ್ರಕಾರ ಇಲ್ಲಿ ಯಾವುದೇ ನಾಲೆಯ ಇರಲಿಲ್ಲ. ಆದರ ಈಗ ಮಹಾನಗರ ಪಾಲಿಕೆಯ ವತಿಯಿಂದ ಮಾರ್ಕಿಂಗ್ ಮಾಡಿ ನಾಲೆಯನ್ನು ನಿರ್ಮಿಸಲಾಗುತ್ತಿದೆ. ಯಾವುದೇ ದಾಖಲೆಯಲ್ಲಿ ನಾಲೆಯ ಉಲ್ಲೇಖವಿಲ್ಲ. ಕಳೆದ ಮೂರು ದಿನಗಳಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದೇವು. ಆದರೇ ಇಂದು ಮತ್ತೇ ಕಾಮಗಾರಿಯನ್ನು ಆರಂಭಿಸಿದ್ದಾರೆ. ನಗರ ಸೇವಕರಾಗಲಿ, ಸಂಬಂಧಿಸಿದ ಅಧಿಕಾರಿಗಳಾಗಲಿ ಬಂದು ನಮ್ಮ ಸಮಸ್ಯೆಗೆ ಕ್ಯಾರೆ ಎನ್ನುತ್ತಿಲ್ಲ. ಚರಂಡಿ ನೀರನ್ನು ಸರಾಗವಾಗಿ ಹರಿದು ಹೋಗುವಂತೆ ಮಾಡಲೂ ಜನರ ಆಸ್ತಿಪಾಸ್ತಿಗೆ ತೊಂದರೆಯಾಗದಂತೆ ಯೋಜನೆಯನ್ನು ರೂಪಿಸಬೇಕೆಂದು ಒತ್ತಾಯಿಸಿದರು.


Spread the love

About Laxminews 24x7

Check Also

ಫೆ.9ರಿಂದ ಮೆಟ್ರೋ ದರ ಏರಿಕೆಗೆ ಸರ್ಕಾರ ಒಪ್ಪಿಗೆ?

Spread the loveಬೆಂಗಳೂರು: ಮೆಟ್ರೋ  ಪ್ರಯಾಣಿಕರಿಗೆ ಮತ್ತೊಮ್ಮೆ ಶಾಕ್ ಎದುರಾಗಿದೆ. ಫೆಬ್ರವರಿ 9ರಿಂದ ಮತ್ತೆ ಮೆಟ್ರೋ ದರ ಏರಿಕೆಯಾಗುವ ಸಾಧ್ಯತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ