Breaking News

ಬೆಂಗಳೂರಲ್ಲಿ ರೂಮ್‌ಮೇಟ್​ನ ಹತ್ಯೆಗೈದು ಪರಾರಿಯಾಗಿದ್ದ ಆರೋಪಿಯ ಬಂಧನ

Spread the love

ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ರೂಮ್‌ಮೇಟ್‌ನನ್ನು ಹತ್ಯೆಗೈದು ಪರಾರಿಯಾಗಿದ್ದ ಆರೋಪಿಯನ್ನು ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಟಿ. ನರಸೀಪುರ ಮೂಲದ ನಾಗರಾಜ್​ (36) ಬಂಧಿತ ಆರೋಪಿ. ಡಿಸೆಂಬರ್ 26 ರಂದು ತನ್ನ ರೂಮ್‌ಮೇಟ್‌ ಶ್ರೀನಿವಾಸ್ (45) ಎಂಬಾತನಿಗೆ ವಾಟರ್ ಹೀಟರ್ ಕಾಯಿಲ್‌ನಿಂದ ಹೊಡೆದು ಹತ್ಯೆಗೈದು ನಾಗರಾಜ್ ಪರಾರಿಯಾಗಿದ್ದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು.

ಟಿ. ನರಸೀಪುರ ಮೂಲದವರಾದ ಇಬ್ಬರೂ ಸಹ ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದರು. ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯ ಶ್ರೀನಿವಾಸನಗರದಲ್ಲಿ ರೂಮ್ ಬಾಡಿಗೆಗೆ ಪಡೆದು ವಾಸವಿದ್ದರು. ಮೃತ ಶ್ರೀನಿವಾಸ್​​ ಮದುವೆಯಾಗಿ ಪತ್ನಿಯನ್ನು ತೊರೆದು ವಾಸವಾಗಿದ್ದ. ರೂಮ್‌ನಲ್ಲಿ ಶ್ರೀನಿವಾಸ್​ ಸದಾ ನಾಗರಾಜ್‌ನ ಮೊಬೈಲ್ ತೆಗೆದುಕೊಂಡು ಕಾಲಕಳೆಯುತ್ತಿದ್ದನಂತೆ. ಅಲ್ಲದೇ ರೂಮ್‌ನ ಕೀಯನ್ನು ನಾಗರಾಜ್‌ಗೆ ಕೊಡುತ್ತಿರಲಿಲ್ಲವಂತೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ