Breaking News

ಗದಗ ನಗರದಲ್ಲಿ ಪುಡಿ ರೌಡಿಗಳ ಅಟ್ಟಹಾಸ ಆರು ಜನರಿಗೆ ಚೂರಿಯಿಂದ ಇರಿತ

Spread the love

ಗದಗ, ಡಿಸೆಂಬರ್ 27: ಗದಗ ನಗರದಲ್ಲಿ ಪುಡಿ ರೌಡಿಗಳು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಜುಮ್ಮಾ ಮಸೀದಿ ಬಳಿ ಗುರುವಾರ ಸಂಜೆ ಆರು ಜನರಿಗೆ ಚೂರಿಯಿಂದ ಇರಿತಯಲಾಗಿದ್ದು,

ಗಾಯಾಳುಗಳ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಅನಿಲ್ ಮುಳ್ಳಾಳ (27), ಚೇತನ್ ಮುಳ್ಳಾಳ, ವಿನಾಯಕ್ ಮುಳ್ಳಾಳ, ಶಾರುಖ್ ಮುಲ್ಲಾ, ಅಭಿಷೇಕ್ ಹರ್ಲಾಪುರ, ಕಿರಣ್ ಸಾಲಿಮಠ ಹೀಗೆ ಆರು ಮಂದಿ ಗಾಯಗೊಂಡಿದ್ದಾರೆ.

ಇಬ್ಬರ ಕುತ್ತಿಗೆಗೆ ಗಂಭೀರ ಗಾಯಗಳಾಗಿವೆ. ಅನಿಲ್ ಮುಳ್ಳಾಳ್ ಹಾಗೂ ವಿನಾಯಕ್ ಮುಳ್ಳಾಳ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಎಸ್ ಡಿಎಂ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಮೂಲಗಳ ಪ್ರಕಾರ, ಈ ಹಲ್ಲೆ ಮೊದಲೇ ನಡೆದ ಗಲಾಟೆಯೊಂದಕ್ಕೆ ಸಂಬಂಧಿಸಿದ್ದಾಗಿದೆ. ಡಿಸೆಂಬರ್ 20 ರಂದು, ಚೇತನ್ ಮುಳ್ಳಾಳ್ ಮತ್ತು ನಿಸಾರ್ ಅಹ್ಮದ್ ನಡುವೆ ಗಲಾಟೆ ನಡೆದುತ್ತು. ಬಳಿಕ ಪರಿಸ್ಥಿತಿ ಶಾಂತವಾಗಿತ್ತು. ಆದರೆ, ಅದೇ ಕಾರಣಕ್ಕೆ ಈಗ ಮತ್ತೆ ಘರ್ಷಣೆ ಸಂಭವಿಸಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ