Breaking News

ಅಧಿಕ ಹಣ ಕೊಡಲು ನಿರಾಕರಿಸಿದ ಗ್ರಾಹಕರನ್ನು ಉದ್ದೇಶಿಸಿ ಕ್ಯಾಬ್​ ಚಾಲಕನ ಆವಾಜ್

Spread the love

ಬೆಂಗಳೂರು: ಅಧಿಕ ಹಣ ಪಾವತಿಸುವಂತೆ ಒತ್ತಾಯಿಸಿ ಕ್ಯಾಬ್​​​ ​ಚಾಲಕನೋರ್ವ ಗ್ರಾಹಕನನ್ನು ಅವಾಚ್ಯವಾಗಿ ನಿಂದಿಸಿ ನಡು ರಸ್ತೆಯಲ್ಲಿ ಹಲ್ಲೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಶನಿವಾರ ಬೆಳಗ್ಗೆ ಪದ್ಮನಾಭನಗರದ ಆರ್​. ಕೆ. ಲೇಔಟ್​ನಲ್ಲಿ ಘಟನೆ ನಡೆದಿದ್ದು, ಕ್ಯಾಬ್​​​ ಚಾಲಕ ಕಾಂತರಾಜು ಎಂಬಾತನ ದುರ್ವರ್ತನೆಯಿಂದ ಬೇಸತ್ತ ಗ್ರಾಹಕ ಶುಭಂ ಎಕ್ಸ್​​​ ಆ್ಯಪ್​ನಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.

ಶನಿವಾರ ಬೆಳಗ್ಗೆ ತಮ್ಮ ಸಂಬಂಧಿಯೊಬ್ಬರಿಗಾಗಿ ಆರ್​. ಕೆ. ಲೇಔಟ್‌ನಿಂದ ಶುಭಂ ಅವರು ಓಲಾ ಕ್ಯಾಬ್​ ಬುಕ್​ ಮಾಡಿದ್ದರು. ಡ್ರಾಪ್​ ಮುಗಿದ ಬಳಿಕ ‘ನಿಗದಿತ ಅಂತರಕ್ಕಿಂತಲೂ 3 ಕಿಲೋಮೀಟರ್ ಹೆಚ್ಚುವರಿಯಾಗಿದೆ, ಆದ್ದರಿಂದ ಹೆಚ್ಚು ಹಣ ಕೊಡಿ’ ಎಂದು ಕೇಳಿದ್ದಾನೆ. ಇದಕ್ಕೆ ನಿರಾಕರಿಸಿದ ಶುಭಂ, ‘ಆ್ಯಪ್‌ನ ಪ್ರಕಾರ ನಾನು ಹಣ ಪಾವತಿಸುತ್ತೇನೆ, ಅಧಿಕ ಹಣ ಪಾವತಿಸಲು ಸಾಧ್ಯವಿಲ್ಲ. ಬೇಕಿದ್ದರೆ ನೀವು ಓಲಾದವರ ಬಳಿ ದೂರು ನೀಡಿ’ ಎಂದಿದ್ದಾರೆ.ಇದೇ ವಿಚಾರಕ್ಕೆ ಕೆಲಕಾಲ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಎಷ್ಟು ದರವಿದೆ ತೋರಿಸಿ ಎಂದ ಶುಭಂ ಚಾಲಕನ ಮೊಬೈಲ್ ಮುಟ್ಟಲು ಯತ್ನಿಸಿದ್ದಾರೆ. ಆ ಸಂದರ್ಭದಲ್ಲಿ ಕೋಪಗೊಂಡ ಚಾಲಕ ಕಾಂತರಾಜು, ಕ್ಯಾಬ್‌ನಿಂದ ಇಳಿದು ಶುಭಂ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ ಹಲ್ಲೆಗೆ ಯತ್ನಿಸಿದ್ದಾನೆ. ಕೊನೆಗೆ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಇಬ್ಬರನ್ನೂ ಸಮಾಧಾನಪಡಿಸಿ ಸ್ಥಳದಿಂದ‌ ಕಳಿಸಿದ್ದಾರೆ. ಘಟನೆಯ ವಿಡಿಯೋ ಚಿತ್ರೀಕರಿಸಿಕೊಂಡಿದ್ದ ಶುಭ ಎಕ್ಸ್ ಆ್ಯಪ್‌ನ ಮೂಲಕ‌ ಪೊಲೀಸರಿಗೆ ದೂರು ನೀಡಿದ್ದಾರೆ.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ