ಬೆಳಗಾವಿ: ನಿನ್ನೆ ಅಧಿವೇಶನದ ಕಲಾಪದಲ್ಲಿ ಬಹುತೇಕ ಸಚಿವರು ಇಡೀ ದಿನ ಪಾಲ್ಗೊಂಡಿದ್ದರು. ಅಧಿವೇಶನ ಮುಗಿಯುತ್ತಿದ್ದಂತೆ ತಮ್ಮ ಕೊಠಡಿಗೆ ತೆರಳಿ ಕೆಲವರು ವಿಶ್ರಾಂತಿ ಪಡೆಯುತ್ತಿದ್ದರೆ, ಮತ್ತೊಂದಿಷ್ಟು ಮಂದಿ ಕಾರ್ಯಕರ್ತರ ಜೊತೆ ಹರಟೆ ಹೊಡೆಯುತ್ತಿದ್ದರು. ಆದರೆ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತ್ರ ಕುಂದಾನಗರಿ ಗಲ್ಲಿಯಲ್ಲಿ ಯಾವುದೇ ಭದ್ರತೆ ಇಲ್ಲದೇ ರನ್ನಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಹೌದು, ಜಾಕೇಟ್-ಟ್ರ್ಯಾಕ್ ಪ್ಯಾಂಟ್-ಶೂ ಹಾಕಿಕೊಂಡು ತಮ್ಮ ಪಾಡಿಗೆ ತಾವೊಬ್ಬರೆ ರನ್ನಿಂಗ್ ಮಾಡುತ್ತಿದ್ದ ಸಚಿವ ಸಂತೋಷ್ ಲಾಡ್ ಅವರನ್ನು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ
ಶನಕ್ಕೆ ಬಂದಾಗಲೂ ಇದೇ ರಾಣಿ ಚನ್ನಮ್ಮ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತ, ಎಸ್ಪಿ ಆಫೀಸ್ ರಸ್ತೆ, ಶ್ರೀಕೃಷ್ಣದೇವರಾಯ ವೃತ್ತದ ರಸ್ತೆಯಲ್ಲಿ ಓಡಿದ್ದೆ. ಈಗಲೂ ಓಡುತ್ತಿದ್ದೇನೆ.
ಕಳೆದ ಮೂರು ತಿಂಗಳಲ್ಲಿ ಐದಾರು ಕೆ.ಜಿ ತೂಕ ಹೆಚ್ಚಾಗಿದೆ. ಹಾಗಾಗಿ, ತೂಕ ಇಳಿಸಲು ರನ್ನಿಂಗ್ ಜಾಸ್ತಿ ಮಾಡಬೇಕೆಂದು 5 ಕಿ.ಮೀ. ಓಡುತ್ತಿದ್ದೇನೆ. ತುಂಬಾ ಖುಷಿ ಆಗುತ್ತದೆ” ಎಂದರು.”ಇನ್ನು, ಮೊದಲಿನಿಂದಲೂ ಈ ಅಭ್ಯಾಸವಿದೆ. ನಾನು ಓರ್ವ ಕ್ರೀಡಾಪಟು. ರನ್ನಿಂಗ್, ಜಿಮ್ಮಿಂಗ್ ನನ್ನ ಹವ್ಯಾಸ. ಬಹುತೇಕ ಸಚಿವರು, ಶಾಸಕರು ಬೆಳಗ್ಗೆ ರನ್ನಿಂಗ್ ಮಾಡಿರುತ್ತಾರೆ. ನನಗೆ ಬೆಳಗ್ಗೆ ಸಾಧ್ಯವಾಗಿರಲಿಲ್ಲ. ಹಾಗಾಗಿ, ಈಗ ಮಾಡುತ್ತಿದ್ದೇನೆ. 2 ತಿಂಗಳಲ್ಲಿ ತೂಕ ಕಮ್ಮಿ ಆಗಬೇಕು. ಆ ನಿಟ್ಟಿನಲ್ಲಿ ಓಡುತ್ತಿದ್ದೇನೆ. ವ್ಯಾಯಾಮ ಮಾಡಿದರೆ ನನಗೆ ನಿದ್ದೆ ಬರುತ್ತದೆ” ಎನ್ನುತ್ತಾರೆ ಸಂತೋಷ ಲಾಡ್.
Laxmi News 24×7