ಮೈಸೂರು: ಪೋಷಕರು ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಬಾಲಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಎಚ್.ಡಿ.ಕೋಟೆ ತಾಲ್ಲೂಕಿನ ಬೆಳಗನಹಳ್ಳಿ ಕಾವಲ್ ಗ್ರಾಮದಲ್ಲಿ ನಡೆದಿದೆ.

ಆದಿತ್ಯ(15 )ವರ್ಷದ ಆತ್ಮಹತ್ಯೆಗೆ ಶರಣಾದ ಬಾಲಕ. ಪೋಷಕರು ಆತನ ಅಕ್ಕನಿಗೆ ಹೆಚ್ಚಿನ ಬೆಲೆ ಮೊಬೈಲ್ ಕೊಡಿಸಿದ್ರು. ಇದರಿಂದ ಕೋಪಗೊಂಡ ಆದಿತ್ಯ, ನನಗೂ ಹೊಸ ಪೋನ್ ಕೊಡಿಸುವಂತೆ ಹಠ ಮಾಡಿದ್ದನು. ಪೋಷಕರು ಕೊಡಿಸುವುದಕ್ಕೆ ಹಿಂದೇಟು ಹಾಕಿರುವುದರಿಂದ ವಿಷ ಸೇವಿಸಿದ್ದಾನೆ.
ಬಾಲಕನನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ. ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7