Breaking News

ಮನ್ ಕೀ ಬಾತ್’ನಲ್ಲಿ ಗುಬ್ಬಚ್ಚಿ ರಕ್ಷಣೆ ಪ್ರಸ್ತಾಪ

Spread the love

ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ “ಗುಬ್ಬಚ್ಚಿ” ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ‘ಮನ್ ಕೀ ಬಾತ್’ನಲ್ಲಿ ಕರೆ ನೀಡಿದ್ದು ಹೆಮ್ಮೆಯ ಸಂಗತಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಬಾಗಲಕೋಟೆ ಬಾದಾಮಿ ತಾಲೂಕಿನ ಬೇಲೂರು ಗ್ರಾಮದಲ್ಲಿ ಇಂದು ಮನ್ ಕೀ ಬಾತ್ ವೀಕ್ಷಿಸಿದ ಸಚಿವರು, ಮಕ್ಕಳು ಗುಬ್ಬಚ್ಚಿಯನ್ನು ಫೋಟೋ – ವಿಡಿಯೋದಲ್ಲಿ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಅವರು ದೇಶದಾದ್ಯಂತ ‘ಮನ್ ಕೀ ಬಾತ್ ‘ ಅಮೋಘ ಕಾರ್ಯಕ್ರಮದ ಮೂಲಕ ದೇಶವಾಸಿಗಳಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಬಣ್ಣಿಸಿದರು.

 

 

ಇಂದಿನ ಆಧುನಿಕ ಯುಗದಲ್ಲಿ ದೇಶಾದ್ಯಂತ ನಗರೀಕರಣ ಹೆಚ್ಚುತ್ತಿರುವ ಕಾರಣ ಗುಬ್ಬಚ್ಚಿ ಹಕ್ಕಿ ಅಳಿವಿನಂಚಿಗೆ ತಲುಪಿದೆ. ಪ್ರಧಾನಿ ಈ ಬಾರಿಯ ಮನ್ ಕೀ ಬಾತ್ ಆವೃತ್ತಿಯಲ್ಲಿ ಇದನ್ನು ಪ್ರಸ್ತಾಸಿದ್ದಾರೆ ಎಂದರು.

ಈಗಿನ ಮಕ್ಕಳಿಗೆ ಗುಬ್ಬಚ್ಚಿಯನ್ನು ವಿಡಿಯೋ ಅಥವಾ ಚಿತ್ರದ ಮುಖಾಂತರ ಪರಿಚಯಿಸುವ ಸಂದರ್ಭ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

 

 

ಅಳಿವಿನಂಚಿನಲ್ಲಿ ಇರುವ ಗುಬ್ಬಚ್ಚಿ ಸಂತತಿ ರಕ್ಷಿಸಲು ಚೆನ್ನೈನ ಕುಡುಗಲ್ ಟ್ರಸ್ಟ್ ತಮ್ಮ ಶಾಲಾ ಮಕ್ಕಳ ಮುಖಾಂತರ ಶತಘತ ಪ್ರಯತ್ನ ನಡೆಸುತ್ತಿದ್ದು, ದೇಶವೇ ಹೆಮ್ಮೆ ಪಡುವ ವಿಚಾರ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.

 

 

ಬಾದಾಮಿ ತಾಲೂಕಿನ ಬೇಲೂರು ಗ್ರಾಮದಲ್ಲಿ ನೆರೆದಿದ್ದ ವಿದ್ಯಾರ್ಥಿಗಳು, ಯುವಕರು ಹಾಗೂ ಅಪಾರ ಸಂಖ್ಯೆಯ ಗ್ರಾಮವಾಸಿಗಳೊಂದಿಗೆ ಸಚಿವ ಪ್ರಲ್ಹಾದ ಜೋಶಿ ಮನ್ ಕೀ ಬಾತ್ ಆಲಿಸಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ