Breaking News

ಬೆಳಗಾವಿಯಲ್ಲಿ ಮಾಸ್ಕ್ ಡೇ ಆಚರಣೆ

Spread the love

ಮಾಸ್ಕ್ ಧರಿಸಿ ಕರೋನಾದಿಂದ ದೂರವಿರಿ!

ಇಂದು ಬೆಳಗಾವಿಯ ಅಶೋಕ ಸರ್ಕಲ್ ನಿಂದ ರಾಣಿ ಚೆನ್ನಮ್ಮ ಸರ್ಕಲ್ ವರೆಗೆ ಪಾದಯಾತ್ರೆ ಮೂಲಕ ಕೊವಿಡ್ 19 ವಿರುದ್ಧ ಜಾಗೃತಿ ಮೂಡಿಸುವುದರೊಂದಿಗೆ ಜನರಿಗೆ ಮಾಸ್ಕ್ ವಿತರಿಸಲಾಯಿತು.

ಕರೋನಾ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸೋಂಕಿನ ವಿರುದ್ಧ ಹೋರಾಡುವುದು ಅನಿವಾರ್ಯವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಿ, ಸುರಕ್ಷಿತವಾಗಿರಿ!

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಶ್ರೀ ಎಸ್ ಬಿ ಬೊಮ್ಮನಹಳ್ಳಿ, ಕೊವಿಡ್ 19 ವಿಶೇಷ ಅಧಿಕಾರಿಗಳಾದ ಡಾ. ರಾಜೇಂದ್ರ ಚೋಳನ್, ಪೋಲಿಸ್ ಕಮಿಷನರ್ ಶ್ರೀ ಲೋಕೇಶ್ ಕುಮಾರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಲಕ್ಷ್ಮಣ್ ನಿಂಬರಗಿ, ಡಿಎಚ್ಓ ಶ್ರೀ ಮುನ್ನಿಹಾಳ್, ಕಾರ್ಪೋರೇಷನ್ ಕಮಿಷನರ್ ಶ್ರೀ ಜಗದೀಶ್, ಡಿಸಿಪಿ ಯಶೋದಾ ವಿ, ಎಸಿ ಶ್ರೀ ಅಶೋಕ್ ಬಿ, ಸ್ಥಳೀಯ ಪ್ರಮುಖರು, ಇತರೆ ಅಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ