ರಾಯಚೂರು: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಯುವಕ ಹಲ್ಲಿನಿಂದ ಕಾರು ಎಳೆಯುವ ಮೂಲಕ ಗಮನ ಸೆಳೆದ. ಮಾನ್ವಿ ಸತೀಶ ಕೋನಾಪುರ ಪೇಟೆ ಸ್ವೀಫ್ಟ್ ಡಿಸೈರ್ ಕಾರಿಗೆ ಹಗ್ಗ ಕಟ್ಟಿ ಹಲ್ಲಿನಿಂದಲೇ ಎಳೆದರು.
ಸುಮಾರು 100 ಮೀಟರ್ ಗಿಂತ ಹೆಚ್ಚು ದೂರ ಕಾರು ಎಳೆಯುವ ಮೂಲಕ ನೆರೆದವರ ಮೆಚ್ಚುಗೆಗೆ ಪಾತ್ರವಾದ.
ಇದರ ಜತೆಗೆ ಅಗ್ನಿ ಶಾಮಕ ದಳದಿಂದಲೂ ಅಗ್ನಿ ಅವಘಡಗಳ ನಿರ್ವಹಣೆ ಕುರಿತು ಪ್ರಾತ್ಯಕ್ಷಿತೆ ಪ್ರದರ್ಶಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು,ಅಧಿಕಾರಿಗಳು ಅನೇಕ ಗಣ್ಯರು ಪಾಲ್ಗೊಂಡಿದ್ದರು.
Laxmi News 24×7