Breaking News

ಮಹಿಳೆ ಮೇಲೆ ಪಿಎಸ್‌ಐ ಅನಿತಾ ರಾಠೋಡರಿಂದ ಹಲ್ಲೆ- ಆರೋಪ

Spread the love

ಚಿಕ್ಕೋಡಿ(ಬೆಳಗಾವಿ ಜಿಲ್ಲೆ): ‘ವಿಚಾರಣೆ ನೆಪದಲ್ಲಿ ಪಿಎಸ್‌ಐ ಅನಿತಾ ರಾಠೋಡ ಅವರು ನನ್ನ ಹೊಟ್ಟೆಗೆ ಒದ್ದು ಗಾಯಗೊಳಿಸಿದ್ದಾರೆ’ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಇದನ್ನು ಅಲ್ಲಗಳೆದಿರುವ ಎಸ್ಪಿ ಡಾ.ಭೀಮಾಶಂಕರ ಗುಳೇದ, ‘ಮಹಿಳೆಯ ಕೆನ್ನೆಗೆ ಹೊಡೆದಿದ್ದು ದೃಢಪಟ್ಟಿದೆ.

ಚಿಕ್ಕೋಡಿ: ಮಹಿಳೆ ಮೇಲೆ ಪಿಎಸ್‌ಐ ಅನಿತಾ ರಾಠೋಡರಿಂದ ಹಲ್ಲೆ- ಆರೋಪ

ಹೊಟ್ಟೆಗೆ ಒದ್ದಿದ್ದು ವೈದ್ಯಕೀಯ ಪರೀಕ್ಷೆಯಲ್ಲಿ ಗೊತ್ತಾಗಿಲ್ಲ’ ಎಂದು‌ ತಿಳಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಸಂತ್ರಸ್ತೆ, ತಾಲ್ಲೂಕಿನ ಖಡಕಲಾಟ ಗ್ರಾಮದ ಪೂನಂ ಮಾಯಣ್ಣವರ, ‘ನನ್ನನ್ನು ಜುಲೈ 27ರಂದು ಠಾಣೆಗೆ ಕರೆಯಿಸಿ, ಹಲ್ಲೆ ಮಾಡಿದ್ದಾರೆ. ನಿಪ್ಪಾಣಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ’ ಎಂದು ಹೇಳಿದ್ದಾರೆ.

‘ಪಕ್ಕದ ಮನೆಯ ಗೋಡೆ ಹಾಗೂ ನೀರಿನ ವಿಚಾರವಾಗಿ ಸಹೋದರರೊಂದಿಗೆ ಜಗಳವಾಡಿ, ನ್ಯಾಯ ಕೇಳಲು ಜುಲೈ 26ರಂದು ಪೊಲೀಸ್ ಠಾಣೆಗೆ ಹೋಗಿದ್ದೆ. ಆದರೆ, ದೂರು ದಾಖಲಿಸಿಕೊಳ್ಳಲಿಲ್ಲ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನನ್ನನ್ನು ಠಾಣೆಗೆ ಕರೆಯಿಸಿಕೊಂಡು, ಮಧ್ಯರಾತ್ರಿ 12ರವರೆಗೂ ಕೂರಿಸಿಕೊಂಡಿದ್ದರು. ಮಾರನೇ ದಿನ ಮತ್ತೆ ಠಾಣೆಗೆ ಕರೆಯಿಸಿ ಕಪಾಳಕ್ಕೆ ಹೊಡೆದಿದ್ದಾರೆ. ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಒದ್ದಿದ್ದಾರೆ. ಮೂರ್ಛೆ ಹೋಗಿದ್ದ ನನ್ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಂಡಿದ್ದೇನೆ’ ಎಂದು ದೂರಿದ್ದಾರೆ.

‘ಮಹಿಳೆ ಮೇಲೆ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿ ಅನಿತಾ ರಾಠೋಡ ಅವರ ವಿಚಾರಣೆ ನಡೆಸಲಾಗುತ್ತಿದೆ. ನೊಂದ ಕುಟುಂಬಕ್ಕೆ ಪೊಲೀಸ್ ಇಲಾಖೆ ನ್ಯಾಯ ಕೊಡಿಸಲಿದೆ’ ಎಂದು ಭೀಮಾಶಂಕರ ಗುಳೇದ ಪ್ರತಿಕ್ರಿಯಿಸಿದ್ದಾರೆ.


Spread the love

About Laxminews 24x7

Check Also

ಶಾರ್ಟ್ ಸರ್ಕ್ಯೂಟ್‌ನಿಂದ ಆಟೋಮೊಬೈಲ್ ಗ್ಯಾರೇಜ್‌ಗೆ ಬೆಂಕಿ; ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

Spread the loveಕಲಬುರಗಿ: ಆಕಸ್ಮಿಕವಾಗಿ ಬೆಂಕಿ ತಗುಲಿ ಎರಡು ಆಟೋಮೊಬೈಲ್ ಅಂಗಡಿಗಳು ಸುಟ್ಟು ಭಸ್ಮವಾಗಿರುವ ಘಟನೆ ಕಲಬುರಗಿ ಜಿಲ್ಲೆಯ  ಅಫಜಲಪುರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ