Breaking News

“ಲಕ್ಷ’ದಲ್ಲಿ “ಸಾವಿರ’ ಮಂದಿಗೆ ಮಾತ್ರ “ಯುವನಿಧಿ’ ಭಾಗ್ಯ

Spread the love

ಮಂಗಳೂರು: ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ “ಯುವನಿಧಿ’ ಆರಂಭದಲ್ಲೇ ಹಿನ್ನಡೆ ಕಾಣುತ್ತಿದ್ದು, ನೋಂದಾಯಿತ “ಲಕ್ಷ’ ಫಲಾನುಭವಿಗಳ ಪೈಕಿ ಹಣ ದೊರೆಯುತ್ತಿರುವುದು ಕೆಲವು “ಸಾವಿರ’ ಮಂದಿಗೆ ಮಾತ್ರ!

ಯೋಜನೆಯ ಫಲಾನುಭವಿಗಳು “ತಾನು ನಿರುದ್ಯೋಗಿ, ವ್ಯಾಸಂಗ ಮುಂದುವರಿಸುತ್ತಿಲ್ಲ ಹಾಗೂ ಸ್ವಉದ್ಯೋಗಿಯಾಗಿಲ್ಲ’ ಎಂದು ಪ್ರತಿ ತಿಂಗಳ 25ನೇ ತಾರೀಕಿನೊಳಗೆ ಕಡ್ಡಾಯವಾಗಿ ಸ್ವಯಂ ಘೋಷಣೆ ಪ್ರಮಾಣಪತ್ರವನ್ನು ಜಿಲ್ಲಾ ಉದ್ಯೋಗಾಧಿಕಾರಿಗೆ ನೀಡಬೇಕು ಎಂದು ಇತ್ತೀಚೆಗೆ ರಾಜ್ಯ ಸರಕಾರ ಹೊಸ ಆದೇಶ ನೀಡಿತ್ತು.

ಆದರೆ ಸಾಕಷ್ಟು ಮಂದಿ ಫಲಾನುಭವಿಗಳು ಮರೆತು ಹೋಗಿ ಸ್ವಯಂ ಘೋಷಣೆ ಮಾಡುವುದಿಲ್ಲ ಅಥವಾ ಕೆಲವರು ವಿಳಂಬವಾಗಿ ಮಾಡುವುದರಿಂದ ಖಾತೆಗೆ ಹಣ ಜಮೆ ಆಗುತ್ತಿಲ್ಲ ಎನ್ನುವುದು ಅಧಿಕಾರಿಗಳ ಅಭಿಪ್ರಾಯ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ