Breaking News

ಮೈಕ್ರೋಸಾಫ್ಟ್‌ ತಾಂತ್ರಿಕ ದೋಷ.ಜಾಗತಿಕವಾಗಿ ಬಳಕೆದಾರರ ಪರದಾಟ

Spread the love

ಮೈಕ್ರೋಸಾಫ್ಟ್‌ ತಾಂತ್ರಿಕ ದೋಷ.ಜಾಗತಿಕವಾಗಿ ಬಳಕೆದಾರರ ಪರದಾಟ

ವದೆಹಲಿ: ಸಾಫ್ಟ್‌ ವೇರ್‌ ಕ್ಷೇತ್ರದ ದಿಗ್ಗಜ ಮೈಕ್ರೋಸಾಫ್ಟ್‌ ವಿಂಡೋಸ್‌ ನಲ್ಲಿ ತಾಂತ್ರಿಕ ದೋಷ ( Technical Issues) ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ (ಜುಲೈ 19) ಭಾರತ ಸೇರಿದಂತೆ ಜಾಗತಿಕವಾಗಿ ಮೈಕ್ರೋಸಾಫ್ಟ್‌ ಬಳಕೆದಾರರು ಪರದಾಡುವಂತಾಗಿತ್ತು.

ಭಾರತದಲ್ಲಿ ವಿಸ್ತಾರ, ಇಂಡಿಗೋ, ಸ್ಪೈಸ್‌ ಜೆಟ್‌ ಮತ್ತು ಅಕ್ಸಾ ವಿಮಾನ ಸಂಸ್ಥೆಗಳು ಟಿಕೆಟ್‌ ಬುಕ್ಕಿಂಗ್‌, ಚೆಕ್‌ ಇನ್‌ ಸೇರಿದಂತೆ ಹಲವು ತಾಂತ್ರಿಕ ದೋಷಗಳನ್ನು ಎದುರಿಸಿದ್ದು, ಏರ್‌ ಲೈನ್ಸ್‌ ಸದ್ಯ ಪ್ರಯಾಣಿಕರನ್ನು ಮ್ಯಾನ್ಯುವಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

ತಾಂತ್ರಿಕ ದೋಷದಿಂದಾಗಿ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿರುವುದು ಗಮನಕ್ಕೆ ಬಂದಿದೆ. ಮೈಕ್ರೋಸಾಫ್ಟ್‌ ತಂಡ ಸಮಸ್ಯೆಯನ್ನು ಬಗೆಹರಿಸಲು ಸಕ್ರಿಯವಾಗಿ ತೊಡಗಿಕೊಂಡಿದೆ. ನಮ್ಮಿಂದಾದ ತೊಂದರೆಗೆ ವಿಷಾದ ವ್ಯಕ್ತಪಡಿಸುತ್ತೇವೆ. ಸಮಸ್ಯೆ ಬಗೆಹರಿದ ತಕ್ಷಣವೇ ಈ ಬಗ್ಗೆ ಮಾಹಿತಿ ನೀಡುತ್ತೇವೆ. ನಿಮ್ಮ ಸಹನೆ ಮತ್ತು ಸಹಕಾರಕ್ಕೆ ಧನ್ಯವಾದಗಳು ಎಂದು ಸ್ಪೈಸ್‌ ಜೆಟ್‌ ಎಕ್ಸ್‌ ನಲ್ಲಿ ತಿಳಿಸಿದೆ.

ಮೈಕ್ರೋಸಾಫ್ಟ್‌ ಸಮಸ್ಯೆಯಿಂದಾಗಿ ನಮ್ಮ ಕಂಪ್ಯೂಟರ್‌ ಗಳು ಕಾರ್ಯನಿರ್ವಹಿಸುತ್ತಿಲ್ಲ. ಇದು ಇತರ ಕಂಪನಿಗಳಿಗೂ ಸಮಸ್ಯೆ ಎದುರಿಸುವಂತಾಗಿದೆ. ಈ ಸಂದರ್ಭದಲ್ಲಿ ಟಿಕೆಟ್‌ ಬುಕ್ಕಿಂಗ್‌, ಚೆಕ್‌ ಇನ್‌, ಬೋರ್ಡಿಂಗ್‌ ಪಾಸ್‌ ಪಡೆಯಲು ಅಸಾಧ್ಯ…ನಿಮ್ಮ ಸಹನೆಗೆ ಮೆಚ್ಚುಗೆ ವ್ಯಕ್ತಪಡಿಸುವುದಾಗಿ ಇಂಡಿಗೋ ಎಕ್ಸ್‌ ನಲ್ಲಿ ಹೇಳಿದೆ.


Spread the love

About Laxminews 24x7

Check Also

ಏಪ್ರಿಲ್‌ಗೆ ಜಿಬಿಎ, ಸ್ಥಳೀಯ ಸಂಸ್ಥೆ ಚುನಾವಣೆ ಸಿದ್ಧತೆಗೆ ಜಿಲ್ಲಾಧಿಕಾರಿಗಳಿಗೆ ಆಯೋಗ ಸೂಚನೆ

Spread the loveಬೆಂಗಳೂರು:ಕಳೆದ ನಾಲ್ಕೈದು ವರ್ಷಗಳಿಂದ ಒಂದಿಲ್ಲೊಂದು ಕಾರಣಗಳಿಂದ ಪದೇ ಪದೇ ಮುಂದೂಡಲಾಗಿದ್ದ ಕರ್ನಾಟಕ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಮುಂಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ