Breaking News

ಕೃಷ್ಣಾ- ಪಂಚಗಂಗಾ ನದಿಗಳ ಸಂಗಮ ಕ್ಷೇತ್ರದ ಸುಕ್ಷೇತ್ರ ನರಸಿಂಹವಾಡಿ ಶ್ರೀ ದತ್ತಮಂದಿರ ಜಲಾವೃತ

Spread the love

ಚಿಕ್ಕೋಡಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಕೃಷ್ಣಾ ಮತ್ತು ಪಂಚಗಂಗಾ ನದಿ ನೀರಿನ ಮಟ್ಟದಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಇದರಿಂದ ಗಡಿಭಾಗದ ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಶಿರೋಳ ತಾಲೂಕಿನ ಸುಕ್ಷೇತ್ರ ನರಸಿಂಹವಾಡಿ ಶ್ರೀ ದತ್ತ ಮಂದಿರ ಜಲಾವೃತಗೊಂಡಿದೆ.

ಕೃಷ್ಣಾ- ಪಂಚಗಂಗಾ ನದಿಗಳ ಸಂಗಮ ಕ್ಷೇತ್ರದ ಸುಕ್ಷೇತ್ರ ನರಸಿಂಹವಾಡಿ ಶ್ರೀ ದತ್ತಮಂದಿರ ಜಲಾವೃತ

ಕೃಷ್ಣಾ ನದಿ ಮತ್ತು ಪಂಚಗಂಗಾ ನದಿ ಸಂಗಮ ಕ್ಷೇತ್ರವಾದ ನರಸಿಂಹವಾಡಿ ಶ್ರೀ ದತ್ತ ದೇವಸ್ಥಾನಕ್ಕೆ ಮಂಗಳವಾರ ನೀರು ನುಗ್ಗಿದೆ. ದೇವವಸ್ಥಾನ ಅರ್ಧ ಭಾಗ ನೀರಿನಲ್ಲಿ ಮುಳುಗಡೆಯಾಗಿದೆ. ಹೀಗಾಗಿ ದೇವಸ್ಥಾನ ಅರ್ಚಕರು ನೀರಿನಲ್ಲಿ ಶ್ರೀ ದತ್ತನ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಬೇರೆ ಕಡೆ ಸ್ಥಳಾಂತರಿಸಿದರು.

ಮಹಾರಾಷ್ಟ್ರ, ಕರ್ನಾಟಕ ಮತ್ತು ನೆರೆಯ ಗೋವಾ ರಾಜ್ಯದಿಂದ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶ್ರೀ ದತ್ತನ ದರ್ಶನ ಪಡೆಯಲು ಆಗಮೀಸುತ್ತಾರೆ. ಆದರೆ ಮಂಗಳವಾರ ದೇವಸ್ಥಾನ ಮುಳುಗಡೆ ಆಗಿರುವುದರಿಂದ ದರ್ಶನ ಮಾಡಲು ಭಕ್ತರು ಪರದಾಡಿದರು.

ಮಧ್ಯಾಹ್ನದ ನಂತರ ಶ್ರೀ ದತ್ತನ ಮೂರ್ತಿಯನ್ನು ಅರ್ಚಕರು ಸುರಕ್ಷಿತ ಸ್ಥಳಕ್ಕೆ ಪ್ರತಿಷ್ಠಾಪನೆ ಮಾಡಿ ಭಕ್ತರ ದರ್ಶನಕ್ಕೆ ಅನುಕೂಲ ಕಲ್ಪಿಸಿದರು.

 


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ