Breaking News

ಅಂಬಾನಿ ಮಗನ ಮದುವೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ 2 ಕೋಟಿ ವಾಚ್ ಗಿಫ್ಟ್..!

Spread the love

ವಿಶ್ವದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಕಿರಿಯ ಮಗನ ಮದುವೆ ಅದ್ದೂರಿಯಾಗಿ ನಡೆದಿದೆ. ಕಳೆದ ಮೂರು ತಿಂಗಳಿನಿಂದಾನೂ ಮದುವೆಯ ಕಾರ್ಯಕ್ರಮಗಳು ನಡೆದಿವೆ. ಸ್ವರ್ಗವನ್ನೇ ಧರೆಗಿಳಿಸಿದ ಮದುವೆಗೆ ಇಂದು ತೆರೆ ಬೀಳಲಿದೆ. ಮದುವೆ ಬಾಲಿವುಡ್, ಟಾಲಿವುಡ್ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ಗಳ ಫ್ಯಾಮಿಲಿ ಕೂಡ ಹೋಗಿದ್ದರು.

ಅದರಂತೆ ರಾಕಿಂಗ್ ಸ್ಟಾರ್ ಯಶ್ ಅವರಿಗೂ ಆಹ್ವಾನಿವಿತ್ತು. ಮುಖೇಶ್ ಅಂಬಾನಿಯ ಮಗನ ಮದುವೆಗೆ ಹೋಗಿದ್ದಂತ ರಾಕಿಬಾಯ್ ಅವರಿಗೆ ದುಬಾರಿ ಉಡುಗೊರೆಯನ್ನು ಅಂಬಾನಿ ಕುಟುಂಬಸ್ಥರು ನೀಡಿದ್ದಾರೆ.ಅಂಬಾನಿ ಮಗನ ಮದುವೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಗೆ 2 ಕೋಟಿ ವಾಚ್ ಗಿಫ್ಟ್..!

ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ವುಡ್ ನ ಸಿಂಡ್ರೆಲಾ ರಾಧಿಕಾ ಪಂಡಿತ್ ಮದುವೆ ಹಾಜರಾಘಿದ್ದರು. ಇದೇ ವೇಳೆ ಟಾಕ್ಸಿಕ್ ಸಿನಿಮಾದ ಹೇರ್ ಸ್ಟೈಲ್ ಕೂಡ ರಿವಿಲ್ ಆಗಿತ್ತು. ಇಬ್ಬರು ಮದುವೆಯನ್ನು ಅಟೆಂಡ್ ಮಾಡಿ ಬಂದಿದ್ದು, ಎರಡು ಕೋಟಿ ಬೆಲೆಯ ವಾಚ್ ಉಡುಗೊರೆಯಾಗಿ ಪಡೆದಿದ್ದಾರೆ. ಸ್ವೊಡ್ಜರ್ಲ್ಯಾಂಡ್ ನ ಆಡಿಮೆರಾಸ್ ಪಿಗೆಟ್ ಬ್ರ್ಯಾಂಡ್ ವಾಚ್ ಇದಾಗಿದೆ.

ಯಶ್ ಅವರಿಗೆ ಮಾತ್ರವಲ್ಲ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್ ಫ್ಯಾಮಿಲಿ, ರಾಮ್ ಚರಣ್ ಫ್ಯಾಮಿಲಿ, ಆಲಿಯಾ ಭಟ್, ರಣಬೀರ್ ಕಪೂರ್, ಪ್ರಿಯಾಂಕ ಚೋಪ್ರಾ, ಜಾಹ್ನವಿ ಕಪೂರ್ ಹೀಗೆ ಬಾಲಿವುಡ್ ಸೆಲೆಬ್ರೆಟಿಗಳ ದಂಡೇ ಅಲ್ಲಿ ನೆರೆದಿತ್ತು. ಎಲ್ಲರಿಗೂ ಈ ದುಬಾರಿ ವಾಚನ್ನು ಉಡುಗೊರೆಯಾಗಿ ನೀಡಲಾಗಿದೆ. ಇದರಲ್ಲಿ ಚಿನ್ನದ ಕೋಟ್ ಬಳಕೆ ಮಾಡಲಾಗಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಸುಮಾರು 5000 ಕೋಟಿ ಹಣ ಬಳಕೆ ಮಾಡಿ, ಮುಖೇಶ್ ಅಂಬಾನಿ ಕಿರಿಯ ಮಗನ ಮದುವೆ ಮಾಡಿದ್ದಾರೆ.


Spread the love

About Laxminews 24x7

Check Also

ಶಾಸಕ ಯತ್ನಾಳರ ಹೊಸ ಪಾರ್ಟಿ ಭಾರತ ರಾಷ್ಟ್ರಹಿತ ಪಾರ್ಟಿ ಪೊಟೊ ವೈರಲ್: ಗಣೇಶೋತ್ಸವದಲ್ಲೇ ಘೋಷಣೆ ಮಾಡ್ತಾರಾ BRP?*

Spread the love ಶಾಸಕ ಯತ್ನಾಳರ ಹೊಸ ಪಾರ್ಟಿ ಭಾರತ ರಾಷ್ಟ್ರಹಿತ ಪಾರ್ಟಿ ಪೊಟೊ ವೈರಲ್: ಗಣೇಶೋತ್ಸವದಲ್ಲೇ ಘೋಷಣೆ ಮಾಡ್ತಾರಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ