Breaking News

ಮಹಾನ್‌ ನಾಯಕರ ಆದರ್ಶ ಅಳವಡಿಸಿಕೊಳ್ಳಿ: ಎಚ್.ಎಸ್.ಬಿಸ್ವಾಗರ

Spread the love

ರಮಾನಂದವಾಡಿ: ‘ವಿದ್ಯಾರ್ಥಿಗಳು ಮಹಾನ್‌ ನಾಯಕರ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಹಾರೂಗೇರಿಯ ಬಿ.ಆರ್.ದರೂರ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಚ್.ಎಸ್.ಬಿಸ್ವಾಗರ ಹೇಳಿದರು.

ಸಮೀಪದ ಯಲ್ಪಾರಟ್ಟಿಯಲ್ಲಿ ಪರಮಾನಂದವಾಡಿಯ ಜೆ.ಪಿ.ಶಿರಗೂರಕರ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದ ಆಶ್ರಯದಲ್ಲಿ ಏಳು ದಿನ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಾನ್‌ ನಾಯಕರ ಆದರ್ಶ ಅಳವಡಿಸಿಕೊಳ್ಳಿ: ಎಚ್.ಎಸ್.ಬಿಸ್ವಾಗರ

‘ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ನಿರ್ದಿಷ್ಟವಾದ ಗುರಿ ಹೊಂದಬೇಕು. ಅದನ್ನು ಸಾಕಾರವಾಗಿಸಲು ನಿರಂತರವಾಗಿ ಶ್ರಮಿಸಿದರೆ ಯಶಸ್ಸು ಗಳಿಸಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸಿದ್ದಪ್ಪ ಗೊಂಧಳಿ ಉಪನ್ಯಾಸ ನೀಡಿದರು. ಪ್ರಾಚಾರ್ಯ ರಾಜು ಕಾಂಬಳೆ ಅಧ್ಯಕ್ಷತೆ ವಹಿಸಿದ್ದರು. ರಮೇಶ ಒಡೆಯರ, ರಾಮಪ್ಪ ಬಂತಿ, ಮಲಕಾರಿ ದಳವಾಯಿ, ಲಕ್ಷ್ಮಣ ತೇರದಾಳ, ಗಿರೆಪ್ಪ ಖವಟಕೊಪ್ಪ, ಶಿವಾನಂದ ಚೌಗಲಾ, ಎನ್.ಬಿ.ಕುಸನಾಳೆ, ಎಚ್.ಎಸ್.ಕುರಣೆ, ಆರ್.ಎಚ್.ನಾಯಿಕ, ಎಸ್.ಎಂ.ಪಾಟೀಲ, ಎಂ.ಬಿ.ಬೆಕ್ಕೇರಿ ಇದ್ದರು. ಡಿ.ಎಂ.ದುರದುಂಡಿ ಸ್ವಾಗತಿಸಿದರು. ಕವಿತಾ ಘಟಕಾಂಬಳೆ ವಂದಿಸಿದರು. ಉಪಪ್ರಾಚಾರ್ಯ ಅಶೋಕ ಶಿರಹಟ್ಟಿ ನಿರೂಪಿಸಿದರು.


Spread the love

About Laxminews 24x7

Check Also

ಡ್ರಗ್ಸ್ ದಂಧೆಕೋರರೊಂದಿಗೆ ಪೊಲೀಸರು ಶಾಮೀಲಾಗಿದ್ದು ಕಂಡುಬಂದ್ರೆ ಎಫ್ಐಆರ್ ದಾಖಲಿಸಿ ಸೇವೆಯಿಂದ ವಜಾ: ಜಿ. ಪರಮೇಶ್ವರ್

Spread the loveಬೆಳಗಾವಿ: ಡ್ರಗ್ಸ್ ಪಿಡುಗಿನ ವಿರುದ್ಧ ಸಮರ ಸಾರಿದ್ದು, ಪೊಲೀಸ್ ಇಲಾಖೆಯಲ್ಲಿದ್ದುಕೊಂಡು ಮಾದಕವಸ್ತು ಮಾರಾಟಕ್ಕೆ ಉತ್ತೇಜನ ನೀಡುವ ಸಿಬ್ಬಂದಿಗಳ ವಿರುದ್ಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ