Breaking News

ಜ್ಞಾನವಿದ್ದವರೇ ಶ್ರೀಮಂತರು: ಸಿದ್ಧಗಂಗಾ ಶ್ರೀ

Spread the love

ಬೆಂಗಳೂರು: ‘ಜ್ಞಾನಕ್ಕೆ ಸಮಾನವಾದುದು ಯಾವುದೂ ಇಲ್ಲ. ಜ್ಞಾನ ಯಾರಲ್ಲಿ ಇರುತ್ತದೆಯೋ ಅವರೇ ಶ್ರೀಮಂತರು. ಶಿಕ್ಷಣದಿಂದ ಮಾತ್ರ ಶಕ್ತಿ ಬರುತ್ತದೆ’ ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.ಜ್ಞಾನವಿದ್ದವರೇ ಶ್ರೀಮಂತರು: ಸಿದ್ಧಗಂಗಾ ಶ್ರೀ

ಕರ್ನಾಟಕದ ವಿವಿಧ ಶಾಲೆಗಳ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ರಕ್ಷಾ ಫೌಂಡೇಷನ್‌ ವತಿಯಿಂದ 2 ಲಕ್ಷ ನೋಟ್‌ ಬುಕ್‌ಗಳನ್ನು ವಿತರಿಸಿದ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು.

 

ಸರ್ಕಾರಿ ಶಾಲೆಯ ಮಕ್ಕಳು ಹೆಚ್ಚು ಪ್ರತಿಭಾವಂತರಾಗಿದ್ದು, ಅವರಿಗೆ ಸರಿಯಾದ ಪ್ರೋತ್ಸಾಹ ದೊರಕಿದರೆ ಸಾಧಕರಾಗಿ ಬೆಳೆಯುತ್ತಾರೆ. ರಕ್ಷಾ ಫೌಂಡೇಷನ್‌ನಂಥ ಸಂಸ್ಥೆಗಳು ಈ ರೀತಿಯ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿವೆ ಎಂದು ಹೇಳಿದರು.

‘ಈ ಜಗದಲ್ಲಿ ಅನಾಥರು ಯಾರೂ ಇಲ್ಲ. ದೇವರು ಎಲ್ಲರನ್ನೂ ಕಾಪಾಡುತ್ತಾನೆ’ ಎಂದು ಹೇಳಿದ ನಟ ಕಿಚ್ಚ ಸುದೀಪ್, ‘ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಪೊಲೀಸ್‌ ಸೇವೆಗೆ ಸೇರುತ್ತಿರುವುದು ಶ್ಲಾಘನಾರ್ಹ’ ಎಂದರು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ