Breaking News

ಬೀನ್ಸ್‌ ಬೆಲೆ ಇಳಿಕೆ; ಟೊಮೆಟೊ ದುಬಾರಿ

Spread the love

ಮೈಸೂರು: ದ್ವಿಶತಕ ದಾಟಿದ್ದ ಬೀನ್ಸ್‌ ಬೆಲೆಯು ಈ ವಾರ ಅರ್ಧದಷ್ಟು ಇಳಿಕೆ ಆಗಿದ್ದು, ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಟೊಮೆಟೊ ಧಾರಣೆ ಏರುಮುಖವಾಗಿದೆ.

ವಾರದ ಹಿಂದಷ್ಟೇ ಬೀನ್ಸ್‌ ಪ್ರತಿ ಕೆ.ಜಿ.ಗೆ ₹200ರವರೆಗೆ ಮಾರಾಟವಾಗಿ ಕೊಳ್ಳುವವರ ಕಣ್ಣಲ್ಲಿ ನೀರು ತರಿಸಿತ್ತು.ಮೈಸೂರು | ಬೀನ್ಸ್‌ ಬೆಲೆ ಇಳಿಕೆ; ಟೊಮೆಟೊ ದುಬಾರಿ

ರಾಜ್ಯದಾದ್ಯಂತ ಕಳೆದೊಂದು ತಿಂಗಳಿಂದ ಹದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರು ಬೀನ್ಸ್‌ ಬೆಳೆಯಲು ಆರಂಭಿಸಿದ್ದು, ಮಾರುಕಟ್ಟೆಗೆ ಉತ್ಪನ್ನದ ಆವಕ ಏರತೊಡಗಿದೆ. ಈ ಹಿನ್ನೆಲೆಯಲ್ಲಿ ಇದರ ಬೆಲೆ ಗಣನೀಯ ಇಳಿಕೆ ಕಂಡಿದೆ. ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಬೀನ್ಸ್‌ನ ಸಗಟು ದರ ಪ್ರತಿ ಕೆ.ಜಿ.ಗೆ ₹65ಕ್ಕೆ ಇಳಿಕೆ ಆಗಿದೆ. ಚಿಲ್ಲರೆ ಮಾರುಕಟ್ಟೆಗಳಲ್ಲಿ ನಾಟಿ ಬೀನ್ಸ್ ₹80 ಹಾಗೂ ನಾರುರಹಿತ ಬೀನ್ಸ್‌ ₹100ರಂತೆ ಮಾರಾಟ ನಡೆದಿದೆ.

ಟೊಮೆಟೊ ಬೆಲೆ ಕ್ರಮೇಣ ಏರಿಕೆ ಆಗತೊಡಗಿದ್ದು, ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ₹50ರಂತೆ ವ್ಯಾಪಾರ ನಡೆದಿದೆ. ತರಕಾರಿ ಬೆಳೆಯುವ ಪ್ರದೇಶಗಳಲ್ಲಿ ನಿರಂತರ ಮಳೆಯಿಂದಾಗಿ ಬೆಳೆ ಹಾಳಾಗಿರುವುದೂ ಬೆಲೆ ಏರಿಕೆಗೆ ಕಾರಣ. ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಇಳಿಯಬಹುದು ಎನ್ನುತ್ತಾರೆ ಎಂ.ಜಿ. ರಸ್ತೆ ತರಕಾರಿ ಮಾರುಕಟ್ಟೆಯಲ್ಲಿನ ವರ್ತಕರು.

ಮಳೆಗಾಲದ ಹಿನ್ನೆಲೆಯಲ್ಲಿ ಸೌತೆ ಹಾಗೂ ನಿಂಬೆಗೆ ಬೇಡಿಕೆ ಕುಸಿದಿದ್ದು, ಬೆಲೆ ಸಹ ಇಳಿಕೆ ಆಗಿದೆ. ಸೌತೆ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹20ಕ್ಕೆ ಕುಸಿದಿದೆ. ಉಳಿದ ತರಕಾರಿಗಳ ಬೆಲೆಯಲ್ಲಿ ಈ ವಾರ ಹೆಚ್ಚು ವ್ಯತ್ಯಾಸ ಆಗಿಲ್ಲ. ಹೆಚ್ಚಿನ ತರಕಾರಿಗಳು ಇನ್ನೂ ತುಟ್ಟಿಯಾಗಿಯೇ ಇವೆ.


Spread the love

About Laxminews 24x7

Check Also

ಜನರ ಆರೋಗ್ಯ ಕಾಪಾಡುವ ಸರಕಾರದ ಸಂಕಲ್ಪಕ್ಕೆ ಕೈಜೋಡಿಸಿ: ಲಕ್ಷ್ಮೀ ಹೆಬ್ಬಾಳಕರ್

Spread the loveಜನರ ಆರೋಗ್ಯ ಕಾಪಾಡುವ ಸರ್ಕಾರದ ಸಂಕಲ್ಪ ಸಾಕಾರಗೊಳ್ಳಬೇಕಾದರೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಕೈಜೋಡಿಸುವುದು ಅಗತ್ಯ ಎಂದು ಮಹಿಳಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ