Breaking News

ನಿತೀಶ್​​​ಗೆ ಇಂಡಿಯಾ ಬಣದಿಂದ ಬಂದಿತ್ತು ಪ್ರಧಾನಿ ಆಫರ್

Spread the love

ಬಿಹಾರ ಮುಖ್ಯಮಂತ್ರಿ ಮತ್ತು ಜನತಾ ದಳ (ಯುನೈಟೆಡ್) ಮುಖ್ಯಸ್ಥ ನಿತೀಶ್ ಕುಮಾರ್ (Nitish Kumar) ಅವರು ಇದೀಗ ಡಿಮ್ಯಾಂಡ್​​​ ಮ್ಯಾನ್​​​​, ಇವರು ಇಂಡಿಯಾಕ್ಕೂ ಬೇಕು ಎನ್​ಡಿಎಗೂ ಬೇಕು, ಆದರೆ ನಿತೀಶ್ ಕುಮಾರ್ ಮಾತ್ರ ಎನ್​​ಡಿಎಗೆ ತಮ್ಮ ಬೆಂಬಲ ನೀಡಿದ್ದಾರೆ.

ಪ್ರಧಾನಿ ಮೋದಿ ಆಡಳಿತವನ್ನು ಮೆಚ್ಚಿಕೊಂಡು, ಜತೆಯಾಗಿ ಕೆಲಸ ಮಾಡಬೇಕು ಎಂಬ ಕಾರಣಕ್ಕೆ ಎನ್​​ಡಿಎ ಸೇರಿಕೊಂಡಿದ್ದಾರೆ, ಆದರೆ ಇತ್ತ ಇಂಡಿಯಾ ಒಕ್ಕೂಟ ಅವರಿಗೆ ಪ್ರಧಾನಿ ಸ್ಥಾನ ನೀಡುತ್ತೇವೆ ಎಂದು ಹೇಳಿದ್ದಾರೆ ಎಂಬ ಸತ್ಯ ಈಗ ಬೆಳಕಿಗೆ ಬಂದಿದೆ.

ಈ ಹಿಂದೆ ನಿತೀಶ್ ಕುಮಾರ್ ನಮ್ಮ ಜತೆಗೆ ನಿಂತರೇ ನಾವು ಅವರಿಗೆ ಉಪಪ್ರಧಾನಿ ಸ್ಥಾನ ನೀಡುತ್ತೇವೆ ಎಂಬ ಮಾತುಗಳು ಕೇಳಿ ಬರುತ್ತಿತ್ತು.

ಆದರೆ ಇದೀಗ ಜೆಡಿಯು ಪಕ್ಷದ ನಾಯಕ ಕೆಸಿ ತ್ಯಾಗಿ ಅವರು ನಿತೀಶ್ ಅವರಿಗೆ ಇಂಡಿಯಾ ಒಕ್ಕೂಟ ಪ್ರಧಾನಿ ಆಫರ್​​​ ನೀಡಿದ್ದರು ಎಂದು ಹೇಳಿದ್ದಾರೆ.

ಆದರೆ ಅದನ್ನು ನಿತೀಶ್ ದಿಕ್ಕಾರಿಸಿದ್ದಾರೆ. ನಾವು ಎನ್‌ಡಿಎ ಜತೆಗೆ ಹೋಗುತ್ತೇವೆ ಎಂದು ಹೇಳಿದ್ದಾರೆ ಎಂದು ಕೆಸಿ ತ್ಯಾಗಿ ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ