Breaking News

ನಾನು ಜೈಲಿಂದ ಹೊರಗಡೆ ಬಂದ ದಿನ ಸರ್ಕಾರ ಪತನವಾಗಲಿದೆ : ದೇವರಾಜೇಗೌಡ ಬಾಂಬ್!

Spread the love

ಹಾಸನ : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಶ್ರೀಲ ವಿಡಿಯೋ ಪೆನ್ ಡ್ರೈವ್ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸ್ಪೋಟಕ ತಿರುವು ಸಿಕ್ಕಿದ್ದು, ಪ್ರಕರಣದ 8ನೇ ಆರೋಪಿಯಾಗಿರುವ ಬಿಜೆಪಿ ಮುಖಂಡ ವಕೀಲ ದೇವರಾಜೇಗೌಡ ನಾನು ಜೈಲಿಂದ ಹೊರಗಡೆ ಬಂದ ತಕ್ಷಣ ಸರ್ಕಾರ ಪತನವಾಗಲಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ನಾನು ಜೈಲಿಂದ ಹೊರಗಡೆ ಬಂದ ದಿನ ಸರ್ಕಾರ ಪತನವಾಗಲಿದೆ : ವಕೀಲ ದೇವರಾಜೇಗೌಡ ಹೊಸ ಬಾಂಬ್!

ಹಾಸನದಲ್ಲಿ ನಾಳೆ ಸಂಜೆಯವರೆಗೆ ಎಸ್ ಐ ಟಿ ಕಸ್ಟಡಿಯಲ್ಲಿರುವ ದೇವರಾಜ ಗೌಡ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣದ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಕೈವಾಡ ಇದೆ. ನನ್ನ ವಿರುದ್ಧ ಲೈಂಗಿಕ ಕಿರುಕುಳ ಕೆಸ್ ಹಾಕಿಸಿದ್ರು ಸಾಕ್ಷಿ ಸಿಗಲಿಲ್ಲ.ನಂತರ ಅತ್ಯಾಚಾರಕ್ಕೆ ಸಾಕಿದರು ಅದರಲ್ಲೂ ಸಾಕ್ಷಿ ಸಿಗಲಿಲ್ಲ ಎಂದು ಹಾಸನದಲ್ಲಿ ಬಿಜೆಪಿ ಮುಖಂಡ ವಕೀಲ ದೇವರಾಜೇಗೌಡ ಹೇಳಿಕೆ ನೀಡಿದರು.

ನನ್ನ ಮಟ್ಟ ಹಾಕಲು ಪೆನ್ ಡ್ರೈವ್ ಕೆಸ್ ನಲ್ಲಿ ಲಾಕ್ ಮಾಡಿಸಿದ್ದಾರೆ. ಇವರೆಲ್ಲರ ಹಿಂದೆ ಡಿಸಿಎಂ ಡಿಕೆ ಶಿವಕುಮಾರ್ ಕೈವಾಡ ಇದೆ ನಾನು ಕೂಡ ಕಾನೂನು ಹೋರಾಟ ಮಾಡುತ್ತೇನೆ. ನಾನು ಜೈಲಿಂದ ಬಂದ ತಕ್ಷಣ ಸರ್ಕಾರ ಪತನವಾಗಲಿದೆ.ಡಿಕೆ ಶಿವಕುಮಾರ್ ರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಗುಡುಗಿದರು.


Spread the love

About Laxminews 24x7

Check Also

ಹೆಂಡತಿಯ ಹತ್ಯೆಗೈದ BSF ಯೋಧ – ಮಹಡಿಯಿಂದ ಬಿದ್ದು ಸಾವು ಎಂದು ಬಿಂಬಿಸಲು ಯತ್ನ

Spread the loveಚಂಡೀಗಢ: ರಜೆ ಮೇಲೆ ಮನೆಗೆ ಬಂದಿದ್ದ ಗಡಿ ಭದ್ರತಾ ಪಡೆ ಯೋಧನೊಬ್ಬ ತನ್ನ ಪತ್ನಿಯನ್ನು ಹತ್ಯೆ ಮಾಡಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ