Breaking News

ಮಗುವನ್ನ ಮಡಿಲಲ್ಲಿ ಮಲಗಿಸಿಕೊಂಡು ಭಿಕ್ಷಾಟನೆ ಮಾಡ್ತಿದ್ದ ತಾಯಿ-ಮಗುವಿನ ರಕ್ಷಣೆ

Spread the love

ಬೆಂಗಳೂರು ಗ್ರಾಮಾಂತರ, ಏ.01: ನಗರದ ಹೊರವಲಯದ ಆನೇಕಲ್(Anekal) ಪಟ್ಟಣದ ಶನಿಮಹಾತ್ಮ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಕಳೆದೊಂದು ವರ್ಷದಿಂದರಾಯಚೂರುಮೂಲದ ಮಹಿಳೆ ಮಗು ಹಿಡಿದುಕೊಂಡು ಭಿಕ್ಷೆ ಬೇಡುತ್ತಿರುವ ಬಗ್ಗೆ ಸ್ಥಳೀಯರು ಡಿಸಿಪಿಓಗೆ ದೂರು ನೀಡಿದ್ದರು. ನಂತರ ನಾಲ್ಕೈದು ಬಾರಿ ಅಧಿಕಾರಿಗಳು ಭಿಕ್ಷೆ ಬೇಡದಂತೆ ಎಚ್ಚರಿಕೆಯನ್ನು ಕೂಡ ನೀಡಿದ್ದರು. ಆದರೆ, ಮತ್ತೆ ದೇವಸ್ಥಾನದ ಮುಂಭಾಗದಲ್ಲಿ ಭಿಕ್ಷೆ ಬೇಡುತ್ತಿರುವ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆಶಾ ನೇತೃತ್ವದ ತಂಡ ದಾಳಿ ಮಾಡಿ, ಇಬ್ಬರನ್ನು ರಕ್ಷಿಸಿದ್ದಾರೆ.

ಕೌನ್ಸಿಲಿಂಗ್ ವೇಳೆ ತಾಯಿ ನೀಡಿದ ಹೇಳಿಕೆಗೆ ಅಧಿಕಾರಿಗಳೇ ಶಾಕ್

ಮಗುವನ್ನ ಮಡಿಲಲ್ಲಿ ಮಲಗಿಸಿಕೊಂಡು ಭಿಕ್ಷಾಟನೆ ಮಾಡ್ತಿದ್ದ ತಾಯಿ-ಮಗುವಿನ ರಕ್ಷಣೆ; ಕೌನ್ಸಿಲಿಂಗ್ ವೇಳೆ ತಾಯಿ ನೀಡಿದ ಹೇಳಿಕೆಗೆ ಅಧಿಕಾರಿಗಳೇ ಶಾಕ್

ಇನ್ನು ತಾಯಿ-ಮಗು ಇಬ್ಬರನ್ನು ರಕ್ಷಿಸಿ ಕೌನ್ಸಿಲಿಂಗ್‌ ಒಳಪಡಿಸಿದಾಗ ಅಧಿಕಾರಿಗಳೇ ಶಾಕ್‌ ಆಗಿದ್ದಾರೆ. ಹೌದು, ಮಹಿಳೆಯ ಅಸಹಾಯಕ ಕಥೆ ಕೇಳಿ ಮರುಗಿದ್ದ ಅಧಿಕಾರಿಗಳು ಒಂದು ಕ್ಷಣ ಮೌನಕ್ಕೆ ಜಾರಿದ್ದರು. ಕುಡುಕ ಗಂಡನನ್ನು ಕಟ್ಟಿಕೊಂಡ ತಪ್ಪಿಗೆ ಭಿಕ್ಷೆ ಬೇಡುವ ಪರಿಸ್ಥಿತಿ ಸೃಷ್ಟಿಯಾಗಿತ್ತು. ಕುಡಿತಕ್ಕೆ ದಾಸನಾಗಿದ್ದ ಪತಿ, ಭಿಕ್ಷೆ ಬೇಡಿ ಕುಡಿಯಲು ಹಣ ತರುವಂತೆ ತಿಳಿಸಿ, ಕಿರುಕುಳ ಕೊಟ್ಟಿದ್ದಾನೆ ಎನ್ನಲಾಗಿದೆ. ಇತನ ಕಾಟಕ್ಕೆ ಬೇಸತ್ತ ಮಹಿಳೆ ಮಗು ಹಿಡಿದುಕೊಂಡು ಭಿಕ್ಷೆ ಬೇಡಲು ಬಂದಿರುವುದಾಗಿ ತಿಳಿಸಿದ್ದಾಳೆ ಎನ್ನಲಾಗಿದೆ.


Spread the love

About Laxminews 24x7

Check Also

ಬಿಗ್‌ ಡೀಲ್‌ ಸಕ್ಸಸ್‌ – ಭಾರತದ ಮೇಲಿನ 25% ಹೆಚ್ಚುವರಿ ಸುಂಕ ಕಡಿತ ಆದೇಶಕ್ಕೆ ಟ್ರಂಪ್‌ ಸಹಿ

Spread the loveವಾಷಿಂಗ್ಟನ್‌: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಕೊನೆಗೂ ಸಕ್ಸಸ್‌ ಕಂಡಿದೆ. ರಷ್ಯಾ ತೈಲ ಖರೀದಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ