Breaking News

ಬೋರ್​​ವೆಲ್ ಕೊರೆಸುವಾಗ ಕಾರಂಜಿಯಂತೆ ಚಿಮ್ಮಿದ ನೀರು; ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ರೈತ

Spread the love

 ಸುಡು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಒಂದೆಡೆಯಾದರೆ, ಮತ್ತೊಂದೆಡೆ ಕೃಷಿ ಚಟುವಟಿಕೆಗಳಿಗೆ ನೀರಿಲ್ಲದೆ ರೈತರು ಕಂಗಾಲಾಗಿದ್ದಾರೆ. ಹೀಗೆ ನೀರಿನ ಸಮಸ್ಯೆಯನ್ನು ಪೂರೈಸಲು ಅದೆಷ್ಟೋ ರೈತರು ಕೊಳವೆ ಬಾವಿಗಳ ಮೊರೆ ಹೋಗಿದ್ದಾರೆ. ಆದರೆ ಇಂದು ಬೋರ್ವೆಲ್ ಕೊರೆದರೂ ಒಂದು ಹನಿ ನೀರು ಸಿಗುತ್ತಿಲ್ಲ.

ಅಂತಹ ಪರಿಸ್ಥಿತಿಯಲ್ಲಿ ಇಲ್ಲೊಬ್ರು ರೈತ ತಮ್ಮ ಜಮೀನಿನಲ್ಲಿ ಬೋರ್ ವೆಲ್ ಕೊರೆಸಿದಾಗ ಬಾನೆತ್ತರಕ್ಕೆ ನೀರು ಚಿಮ್ಮಿದ್ದು, ನೀರು ಕಂಡ ಖುಷಿಯಲ್ಲಿ ರೈತ ಕುಣಿದು ಕುಪ್ಪಳಿಸಿದ್ದಾರೆ. ಈ ಹೃದಯಸ್ಪರ್ಷಿ ವಿಡಿಯೋ ಇದೀಗ ವೈರಲ್ ಆಗುತ್ತಿದೆ.ತೀವ್ರ ಬಿಸಿಲಿನ ತಾಪದ ಕಾರಣ ನೀರಿನ ಕೊರತೆ ತೀವ್ರವಾಗುತ್ತಿದೆ. ಈ ಸುಡು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಒಂದದೆಡೆಯಾದರೆ, ಇನ್ನೊಂದೆಡೆ ಕೃಷಿ ಕಾರ್ಯಕ್ಕೆ ನೀರು ಸಿಗುತ್ತಿಲ್ಲ ಎಂದು ರೈತರು ಕಂಗಾಲಾಗಿದ್ದಾರೆ. ಹೀಗೆ ನೀರಿನ ಸಮಸ್ಯೆಯನ್ನು ನೀಗಿಸಲು ರೈತರು ಕೊಳವೆ ಬಾವಿಗಳ ಮೊರ ಹೋಗುತ್ತಿದ್ದಾರೆ. ಅದೆಷ್ಟೋ ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ನೀರಿನ ಬದಲು ಕೇವಲ ಕಲ್ಲು ಪುಡಿ ಸಿಗುತ್ತಿದೆ.

ಇನ್ನೂ ಹೊಸ ಬೋರ್ವೆಲ್ ಕೊರೆಸಿದರೂ ಒಂದು ಹನಿ ನೀರು ಲಭಿಸುತ್ತಿಲ್ಲ. ಆದರೆ ಇಲ್ಲೊಬ್ರು ರೈತ ಕೊರೆಸಿದ ಕೊಳವೆ ಬಾವಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಲಭಿಸಿದ್ದು, ಬೋರ್ ವೆಲ್ ಕೊರೆಯುವಾಗ ಬಾನೆತ್ತರಕ್ಕೆ ನೀರು ಚಿಮ್ಮಿದೆ. ನೀರು ಕಂಡ ಖುಷಿಯಲ್ಲಿ ಆ ರೈತ ಕುಣಿದು ಕುಪ್ಪಲಿಸಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ