Breaking News

ದೆಹಲಿಯಲ್ಲಿ ಪ್ರತಿಪಕ್ಷಗಳ ಸಮಾವೇಶ: ಚುನಾವಣಾ ಆಯೋಗಕ್ಕೆ INDIA ಮೈತ್ರಿಕೂಟದ ನ 5 ಬೇಡಿಕೆಗಳು ಇಂತಿವೆ…

Spread the love

ವದೆಹಲಿ: ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಪ್ರತಿಪಕ್ಷಗಳ ಸಮಾವೇಶ ಇಂದು ನಡೆದಿದ್ದು, ಶಿವಸೇನೆ (ಉದ್ಧವ್ ಠಾಕ್ರೆ ಬಣ) ಆಮ್ ಆದ್ಮಿ ಪಕ್ಷ ಸೇರಿದಂತೆ ಪ್ರತಿಪಕ್ಷಗಳ ನಾಯಕರು ಒಗ್ಗಟ್ಟು ಪ್ರದರ್ಶಿಸಿದರು.

ದೆಹಲಿಯಲ್ಲಿ ಪ್ರತಿಪಕ್ಷಗಳ ಸಮಾವೇಶ: ಚುನಾವಣಾ ಆಯೋಗಕ್ಕೆ INDIA ಮೈತ್ರಿಕೂಟದ ನ 5 ಬೇಡಿಕೆಗಳು ಇಂತಿವೆ...
ಮದ್ಯ ನೀತಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿ ಸಿಎಂ ಕೇಜ್ರಿವಾಲ್ ಹಾಗೂ ಭೂಹಗರಣದ ಸಂಬಂಧ ಬಂಧನಕ್ಕೆ ಒಳಗಾಗಿರುವ ಜಾರ್ಖಂಡ್ ನ ಮಾಜಿ ಸಿಎಂ ಹೇಮಂತ್ ಸೊರೇನ್ ಅವರನ್ನು ಬಂಧಮುಕ್ತಗೊಳಿಸಬೇಕೆಂದು ಪ್ರತಿಪಕ್ಷಗಳು ಈ ಸಭೆಯಲ್ಲಿ ಒತ್ತಾಯಿಸಿವೆ.

 

ದೇಶದ ಪ್ರಜಾಪ್ರಭುತ್ವದ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ನಾಯಕರು, ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ಬಿಜೆಪಿ ಪ್ರತಿಪಕ್ಷಗಳನ್ನು ನಾಶಮಾಡುತ್ತಿದೆ ಎಂದು ಆರೋಪಿಸಿದರು. ಈ ಸಮಾವೇಶದ ಬಗ್ಗೆ ಲೇವಡಿ ಮಾಡಿರುವ ಪ್ರತಿಪಕ್ಷ ಬಿಜೆಪಿ, ರ್ಯಾಲಿಯು ಪ್ರಜಾತಂತ್ರವನ್ನು ಉಳಿಸುವ ಉದ್ದೇಶದಿಂದ ನಡೆದಿಲ್ಲ ಬದಲಾಗಿ “ಕುಟುಂಬವನ್ನು ಉಳಿಸಿ” ಮತ್ತು “ಭ್ರಷ್ಟಾಚಾರವನ್ನು ಮರೆಮಾಡಿ” ಎಂಬ ಉದ್ದೇಶದಿಂದ ನಡೆದಿದೆ ಎಂದು ಹೇಳಿದೆ.


Spread the love

About Laxminews 24x7

Check Also

ಏಪ್ರಿಲ್‌ಗೆ ಜಿಬಿಎ, ಸ್ಥಳೀಯ ಸಂಸ್ಥೆ ಚುನಾವಣೆ ಸಿದ್ಧತೆಗೆ ಜಿಲ್ಲಾಧಿಕಾರಿಗಳಿಗೆ ಆಯೋಗ ಸೂಚನೆ

Spread the loveಬೆಂಗಳೂರು:ಕಳೆದ ನಾಲ್ಕೈದು ವರ್ಷಗಳಿಂದ ಒಂದಿಲ್ಲೊಂದು ಕಾರಣಗಳಿಂದ ಪದೇ ಪದೇ ಮುಂದೂಡಲಾಗಿದ್ದ ಕರ್ನಾಟಕ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಮುಂಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ