Breaking News

ಸಿದ್ದರಾಮಯ್ಯರಿಗೆ ಸ್ಫೋಟ ಬೆದರಿಕೆ! ಸ್ಫೋಟಕ್ಕೆ ದಿನಾಂಕ ಫಿಕ್ಸ್‌!

Spread the love

ಬೆಂಗಳೂರಿನ ʻರಾಮೇಶ್ವರಂ ಕೆಫೆʼಯ ಸ್ಫೋಟದ ನಂತ್ರ ಇದೀಗ ಸಿಎಂ ಸಿದ್ಧರಾಮಯ್ಯರಿಗೆ ಸ್ಪೋಟದ ಬೆದರಿಕೆ ಬಂದಿದೆ. ಮಾರ್ಚ್‌ 04 ರಂದು ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌, ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್‌ ಅವ್ರಿಗೆ ಇಮೇಲ್‌ ಒಂದನ್ನ ಕಳುಹಿಸಿ ಸ್ಫೋಟದ ಬೆದರಿಕೆ ನೀಡಲಾಗಿದೆ.

ಶಾಹಿದ್‌ ಖಾನ್‌ ಅನ್ನೋ ಹೆಸರಿನ ವ್ಯಕ್ತಿ ಈ ರೀತಿ ಇಮೇಲ್‌ ಕಳುಹಿಸಿದ್ದ ಎನ್ನಲಾಗಿದೆ. ಅಲ್ದೇ ಬರುವ ಶನಿವಾರ ಅಂದ್ರೆ ಮಾರ್ಚ್‌ 9ರ ಮಧ್ಯಾಹ್ನ 02:48ಕ್ಕೆ ಕರ್ನಾಟಕದಾದ್ಯಂತ ಬಸ್‌, ಟ್ರೈನ್‌, ದೇವಸ್ಥಾನ, ಹೋಟೆಲ್‌ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಸ್ಫೋಟ ಸಂಭವಿಸಲಿದೆ ಅಂತ ಇಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ವೇಳೆ ಸಿಎಂ ಸಿದ್ಧರಾಮಯ್ಯ, ಡಿಕೆ ಶಿವಕುಮಾರ್‌, ಜಿ ಪರಮೇಶ್ವರ್‌ ಮತ್ತು ಕರ್ನಾಟಕದ ಪ್ರಮುಖ ಪೊಲೀಸ್‌ ಅಧಿಕಾರಿಯನ್ನ ಟಾರ್ಗೆಟ್‌ ಮಾಡಲಾಗುತ್ತೆ ಅಂತಾನೂ ಹೇಳಲಾಗಿದೆ.

ಅಷ್ಟೇ ಅಲ್ಲ ಹೀಗಾಗೋದನ್ನ ತಡೀಬೇಕಾದ್ರೆ…20 ಕೋಟಿ ರೂಪಾಯಿ ನೀಡ್ಬೇಕು ಅಂತ ಡಿಮಾಂಡ್‌ ಕೂಡ ಇಡಲಾಗಿದೆ. ಸದ್ಯ ಈ ಬಗ್ಗೆ ಕೇಸ್‌ ದಾಖಲಾಗಿದ್ದು ತನಿಖೆ ನಡೆಸಲಾಗ್ತಿದೆ. ಇನ್ನು ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ NIA ಇದೀಗ ಬೆಂಗಳೂರು ಮತ್ತು ಚೆನೈನ ಹಲವಾರು ಪ್ರದೇಶಗಳಲ್ಲಿ ಕಾರ್ಯಚರಣೆ ನಡೆಸ್ತಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ