Breaking News

ಬೆಳಗಾವಿ: ಕೆರೆ ಅಭಿವೃದ್ಧಿ, ಹಸ್ತಾಂತರ

Spread the love

ಬೆಳಗಾವಿ: ‘ಪ್ಯಾಸ್‌’ ಫೌಂಡೇಷನ್‌ ವತಿಯಿಂದ ಅಭಿವೃದ್ಧಿ ಪಡಿಸಿದ ಮಚ್ಚೆ ಗ್ರಾಮದ ಕೆರೆಯನ್ನು ಈಚೆಗೆ ಸಣ್ಣ ನೀರಾವರಿ ಇಲಾಖೆಗೆ ಹಸ್ತಾಂತರಿಸಲಾಯಿತು.

2021ರಲ್ಲಿ ಈ ಕೆರೆಯನ್ನು ದತ್ತು ಪಡೆದಿದ್ದ ಫೌಂಡೇಷನ್‌ ತನ್ನ ಸಿಎಸ್‌ಆರ್ ಅನುದಾನದಲ್ಲಿ ಅಭಿವೃದ್ಧಿ ಮಾಡಿದೆ.

ಎಕೆಪಿ ಫೆರೋಕಾಸ್ಟ್ಸ್ ಗ್ರೂಪ್‌ನ ಮುಖ್ಯಸ್ಥ ರಾಮ್ ಭಂಡಾರಿ, ಪರಾಗ್ ಭಂಡಾರಿ ಮತ್ತು ಗೌತಮ್ ಭಂಡಾರಿ ಅವರ ಸಹಾಯದಿಂದ ಪ್ರತಿಷ್ಠಾನವು ಯೋಜನೆ ಪೂರ್ಣಗೊಳಿಸಿ ಗ್ರಾಮಸ್ಥರಿಗೆ ನೀಡಿದೆ.

ಬೆಳಗಾವಿ: ಕೆರೆ ಅಭಿವೃದ್ಧಿ, ಹಸ್ತಾಂತರ

ನಾಲ್ಕು ಎಕರೆ ವಿಸ್ತೀರ್ಣ ಹೊಂದಿದ ಕೆರೆಯನ್ನು ₹17 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. 20 ಅಡಿ ಆಳದವರೆಗೆ ಅಗೆದು ಹೂಳು ತೆಗೆಯಿಸಿ, ಬದುಗಳನ್ನು ಕಟ್ಟಲಾಗಿದೆ. ಕೆರೆಗೆ ನೀರು ಹರಿದುಬರುವಂತೆ ಇಳಿಜಾರು ನಿರ್ಮಿಸಲಾಗಿದೆ. ಕಾಮಗಾರಿಗೆ ಶಾಸಕ ಶಾಸಕ ಅಭಯ ಪಾಟೀಲ ಸಹಕರ ನೀಡಿದ್ದಾರೆ ಎಂದು ಫೌಂಡೇಷನ್‌ ತಿಳಿಸಿದೆ.

ಈ ಕಾಮಗಾರಿಯ ಕಾರಣ ಈಗಾಗಲೇ ಗ್ರಾಮದ ಸುತ್ತಲಿನ ಬಾವಿ ಹಾಗೂ ಬೋರ್‌ವೆಲ್‌ಗಳಲ್ಲೂ ನೀರು ಹೆಚ್ಚಾಗಿದೆ. ರೈತರು ಕೃಷಿ ಮಾಡಲು ನೆರವಾಗುವ ಸಾಧ್ಯತೆ ಇದೆ ಎಂದೂ ಫೌಂಡೇಷನ್‌ ಹೇಳಿದೆ.

ಕೆರೆ ಹಸ್ತಾಂತರ ಸಮಾರಂಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ರಾಮ್‌ ಭಂಡಾರಿ ಅವರು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಎಸ್‌.ಮಾಳಗಿ ಅವರಿಗೆ ಪತ್ರ ಹಸ್ತಾಂತರಿಸಿದರು. ಎಕೆಪಿ ಮುಖಸ್ಥ ಡಾ.ಮಾಧವ್‌ ಪ್ರಭು, ಸಂಯೋಜಕ ಅವಧೂತ್‌ ಸಮಂತ್‌ ಹಾಗೂ ಗ್ರಾಮದ ಹಿರಿಯರು ಪಾಲ್ಗೊಂಡರು.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ