Breaking News

ಪರಿಶಿಷ್ಟರ ಅನುದಾನ ಅನ್ಯಕಾರ್ಯಕ್ಕೆ ಬಳಸಬೇಡಿ: ದಸಂಸ

Spread the love

ಚಿಕ್ಕೋಡಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಪಟ್ಟಣದ ಬಸವ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಪರಿಶಿಷ್ಟರಿಗೆ ಮೀಸಲಿಟ್ಟ ಅನುದಾನವನ್ನು ಬೇರೆ ಕೆಲಸಗಳಿಗೆ ಬಳಸಬಾರದು. ಪರಿಶಿಷ್ಟರಿಗೆ ನೀಡಿದ ಜಮೀನನ್ನು ಪರಭಾರೆ ಮಾಡಬಾರದು.

ಪರಿಶಿಷ್ಟರ ಅನುದಾನ ಅನ್ಯಕಾರ್ಯಕ್ಕೆ ಬಳಸಬೇಡಿ: ದಸಂಸ

ದೌರ್ಜನ್ಯ ತಡೆಗೆ ಪ್ರತಿಯಾಗಿ ಪ್ರಕರಣ ದಾಖಲಿಸಬಾರದು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ಉಪ ವಿಭಾಗಾಧಿಕಾರಿ ಮಹೆಬೂಬಿ ಅವರಿಗೆ ಸಲ್ಲಿಸಿದರು.

ಬಸವ ವೃತ್ತದ ಬಳಿಯಲ್ಲಿ ಕೆಲ ಕಾಲ ನಿಪ್ಪಾಣಿ- ಮುಧೋಳ ಹಾಗೂ ಸಂಕೇಶ್ವರ- ಜೇವರ್ಗಿ ರಾಜ್ಯ ಹೆದ್ದಾರಿಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಮುತ್ತಣ್ಣ ರಾಯಣ್ಣವರ, ಕಲ್ಲಪ್ಪ ರಾಮಚನ್ನವರ, ರವಿ ಬಸ್ತವಾಡಕರ, ಸವಿತಾ ಅಸೋಧೆ ನೇತೃತ್ವ ವಹಿಸಿದ್ದರು.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ